ಬಾಯಿ ಕ್ಯಾನ್ಸರ್‌ಗೆ ಏನು ಕಾರಣ ಗೊತ್ತೇ?

Update: 2018-02-05 04:25 GMT

ಹೈದರಾಬಾದ್, ಫೆ. 5: ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವ ತಂಬಾಕು ಸಂಬಂಧಿ ಕ್ಯಾನ್ಸರ್ ಸಂದೇಶಗಳಿಗೆ ನೀವು ಗಮನ ಹರಿಸಿಲ್ಲ ಎಂದಾದರೆ, ತಂಬಾಕು ಮತ್ತು ಕುಡಿತದಿಂದ ಆಗುವ ಅಪಾಯದ ಬಗ್ಗೆ ಎನ್‌ಎಂಜೆ ನಡೆಸಿದ ಅಧ್ಯಯನದ ವರದಿಯನ್ನಂತೂ ಓದಲೇಬೇಕು. ಎನ್‌ಎಂಜೆ ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ ಮತ್ತು ಹೈದರಾಬಾದ್ ಪ್ರಾದೇಶಿಕ ಕೇಂದ್ರ ಸಂಯುಕ್ತವಾಗಿ ಈ ಅಧ್ಯಯನ ನಡೆಸಿವೆ.

ಒಂದು ವರ್ಷದಲ್ಲಿ ನಗರದ ಆಸ್ಪತ್ರೆಯಲ್ಲಿ ದಾಖಲಾದ 258 ಬಾಯಿ ಕ್ಯಾನ್ಸರ್ ಪ್ರಕರಣಗಳ ಪೈಕಿ ಶೇಕಡ 97ರಷ್ಟು ರೋಗಿಗಳು ನಿಯತವಾಗಿ ಹೊಗೆರಹಿತ ತಂಬಾಕು ಸೇವನೆ, ಆಲ್ಕೋಹಾಲ್ ಸೇವನೆ ಮತ್ತು ಸಿಗರೇಟ್ ಸೇರುತ್ತಿರುವುದು ಪತ್ತೆಯಾಗಿದೆ ಎಂದು ಅಧ್ಯಯನ ವರದಿ ಹೇಳಿದೆ.

258 ರೋಗಿಗಳ ಪೈಕಿ 205 ಮಂದಿ ಹೊರೆರಹಿತ ತಂಬಾಕು ಸೇವನೆ ಮಾಡುತ್ತಿದ್ದಾರೆ. 82 ಮಂದಿ ಗುಟ್ಕಾ ಸೇವಿಸುತ್ತಾರೆ, 20 ಮಂದಿ ಝರದಾ ಹಾಗೂ 4 ಮಂದಿ ಖೈನಿ ಸೇವಿಸುತ್ತಾರೆ. 67 ಮಂದಿ ಒಂದಕ್ಕಿಂತ ಹೆಚ್ಚು ಮಾದಕ ಉತ್ಪನ್ನಗಳನ್ನು ಸೇವಿಸುತ್ತಾರೆ ಎಂದು ವರದಿ ಹೇಳಿದೆ.

ಆಲ್ಕೋಹಾಲ್ ಮತ್ತು ದೂಮಪಾನ ಮಾಡುವವರೂ ಇದ್ದಾರೆ. ಒಟ್ಟು 118 ಮಂದಿ ಆಲ್ಕೋಹಾಲ್ ವ್ಯಸನ ಬೆಳೆಸಿಕೊಂಡಿದ್ದು, 93 ಮಂದಿ ಸಿಗರೇಟ್, ಬೀಡಿ, ಚುಟ್ಕಾ ಸೇವನೆ ಮಾಡುತ್ತಾರೆ. 65 ಮಂದಿ ಆಲ್ಕೋಹಾಲ್ ಮತ್ತು ದೂಮಪಾನಕ್ಕೆ ದಾಸರಾಗಿದ್ದಾರೆ ಎಂದು ವರದಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News