ಕೆಂಪು ಮಾಂಸ ಅಥವಾ ಬಿಳಿಯ ಮಾಂಸ: ಯಾವುದು ಆರೋಗ್ಯಕರ?

Update: 2019-05-17 18:34 GMT

 ವಿಟಾಮಿನ್‌ಗಳು ಮತ್ತು ಖನಿಜಗಳನ್ನೂ ಒಳಗೊಂಡಿರುತ್ತದೆ. ಆದರೆ ಯಾವುದು ನಿಜಕ್ಕೂ ಆರೋಗ್ಯಕರ,ಕೆಂಪು ಮಾಂಸವೇ ಅಥವಾ ಬಿಳಿಯ ಮಾಂಸವೇ ಎನ್ನುವುದು ಮುಖ್ಯ ಪ್ರಶ್ನೆಯಾಗಿದೆ.

 ಆಡು,ಮೇಕೆ ಇತ್ಯಾದಿಗಳು ಕೆಂಪು ಮಾಂಸವನ್ನು ಹೊಂದಿದ್ದರೆ,ಕೋಳಿ,ಮೀನು ಮತ್ತು ಬಾತುಕೋಳಿ ಇತ್ಯಾದಿಗಳ ಮಾಂಸ ಬಿಳಿಯ ಬಣ್ಣದ್ದಾಗಿರುತ್ತದೆ. ಕೆಂಪುಮಾಂಸದ ಸೇವನೆ ಬೇಡವೇ ಬೇಡ,ಬಿಳಿಯ ಮಾಂಸವನ್ನೇ ಹೆಚ್ಚಾಗಿ ಸೇವಿಸಬೇಕು ಎನ್ನುವುದು ಸಾಮಾನ್ಯವಾಗಿ ಕೇಳಿಬರುವ ಮಾತು. ಆದರೆ ಅಂತಹುದ್ದೇನಿಲ್ಲ,ಎರಡೂ ವಿಧಗಳ ಮಾಂಸ ತಮ್ಮದೇ ಆದ ಒಳಿತು-ಕೆಡಕುಗಳನ್ನು ಹೊಂದಿವೆ. ಕೆಂಪು ಮಾಂಸದಲ್ಲಿ ಕಿರು ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿದ್ದು,ಹಲವಾರು ಪೌಷ್ಟಿಕ ವೌಲ್ಯಗಳನ್ನು ಹೊಂದಿದೆ. ಕೆಂಪು ಮಾಂಸದ ಸೇವನೆಯು ರಕ್ತಹೀನತೆಯಂತಹ ಸಮಸ್ಯೆಗಳನ್ನು ನಿವಾರಿಸಲು ನೆರವಾಗುತ್ತದೆ. ಅದು ಸಮೃದ್ಧ ಪೋಷಕಾಂಶಗಳನ್ನು ಹೊಂದಿದೆಯಾದರೂ ಅದರಲ್ಲಿ ಕೊಬ್ಬಿನ,ಮುಖ್ಯವಾಗಿ ಸ್ಯಾಚ್ಯುರೇಟೆಡ್ ಫ್ಯಾಟ್‌ನ ಪ್ರಮಾಣವೂ ಅಧಿಕವಾಗಿದೆ.

ಅತಿಯಾದ ಸ್ಯಾಚ್ಯುರೇಟೆಡ್ ಫ್ಯಾಟ್‌ನ ಸೇವನೆಯು ಹೃದ್ರೋಗ ಮತ್ತು ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಕೆಂಪುಮಾಂಸದ ಸೇವನೆಯು ಹೆಚ್ಚುತ್ತಿದ್ದಂತೆ ಕರುಳಿನ ಅಥವಾ ಗುದ ಕ್ಯಾನ್ಸರ್‌ನ ಅಪಾಯವೂ ಹೆಚ್ಚುತ್ತದೆ. ಕೆಂಪು ಮಾಂಸವನ್ನು ಗ್ರಿಲ್ ಮಾಡಿದಾಗ ಆಥವಾ ಹೆಚ್ಚಿನ ಉಷ್ಣತೆಯಲ್ಲಿ ಬೇಯಿಸಿದಾಗ ಅದು ಕ್ಯಾನ್ಸರ್‌ಕಾರಕಗಳನ್ನು ಉತ್ಪಾದಿಸುತ್ತದೆ. ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯವನ್ನು ತಗ್ಗಿಸಲು ಕೆಂಪು ಮಾಂಸದ ಸೇವನೆಯನ್ನು ್ನವಾರಕ್ಕೆ 455 ಗ್ರಾಮ್‌ಗಳಿಗೆ ಸೀಮಿತಗೊಳಿಸಬೇಕು ಎನ್ನುತ್ತಾರೆ ಸಂಶೋಧಕರು.

ಬಿಳಿಯ ಮಾಂಸ

 ಕೆಂಪು ಮಾಂಸಕ್ಕೆ ಹೋಲಿಸಿದರೆ ಬಿಳಿಯ ಮಾಂಸದಲ್ಲಿ ಕ್ಯಾಲರಿಗಳು,ಕೊಬ್ಬು ಮತ್ತು ಸ್ಯಾಚ್ಯುರೇಟೆಡ್ ಫ್ಯಾಟ್ ಅರ್ಧಕ್ಕೂ ಕಡಿಮೆ ಪ್ರಮಾಣದಲ್ಲಿರುತ್ತವೆ. ಆದರೆ ಬಿಳಿಯ ಮಾಂಸವನ್ನು ಚರ್ಮಸಹಿತ ಸೇವಿಸಿದಾಗ ಅದು ಹೆಚ್ಚುಕಡಿಮೆ ಕೆಂಪುಮಾಂಸದಲ್ಲಿರುವಷ್ಟೇ ಕ್ಯಾಲರಿಗಳು ಮತ್ತು ಕೊಬ್ಬನ್ನು ಒಳಗೊಂಡಿರುತ್ತದೆ.

ಹೀಗೆ ಕೆಂಪುಮಾಂಸ ಮತ್ತು ಬಿಳಿಯ ಮಾಂಸ ತಮ್ಮದೇ ಆದ ಲಾಭ-ನಷ್ಟಗಳನ್ನು ಹೊಂದಿವೆ. ಮಾಂಸವನ್ನು ಸೇವಿಸುವುದಿದ್ದರೆ ಸಮತೋಲಿತ ಆಹಾರದ ಭಾಗವಾಗಿ ಎರಡನ್ನೂ ಸಣ್ಣ ಪ್ರಮಾಣಗಳಲ್ಲಿ ಸೇರಿಸಿಕೊಳ್ಳುವುದು ಉತ್ತಮವಾಗುತ್ತದೆ. ಕೆಂಪು ಮಾಂಸಕ್ಕಿಂತ ಬಿಳಿಯ ಮಾಂಸವನ್ನೇ ಹೆಚ್ಚು ಸಲ ಸೇವಿಸಿ,ಆದರೆ ಎರಡರ ಲಾಭಗಳನ್ನೂ ಪಡೆದುಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News