ಪಾರ್ಲರ್‌ಗಳಲ್ಲಿಯೂ ಹೆಪಟೈಟಿಸ್ ಸೋಂಕುಂಟಾಗಬಹುದು!
ಪಾರ್ಲರ್‌ಗಳಲ್ಲಿಯೂ ಹೆಪಟೈಟಿಸ್(ಯಕೃತ್ತಿನ ಉರಿಯೂತ) ಸೋಂಕುಂಟಾಗಬಹುದು ಎನ್ನುವುದು ನಿಮಗೆ ಗೊತ್ತೇ? ಈ ಅಪಾಯಕಾರಿ ವೈರಸ್ ಕುರಿತು ಜನರಲ್ಲಿರುವ ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳು ಇಲ್ಲಿವೆ.
►ಎಲ್ಲ ಹೆಪಟೈಟಿಸ್ ವೈರಸ್‌ಗಳು ಒಂದೇ ಆಗಿರುತ್ತವೆ
ಹೆಪಟೈಟಿಸ್ ಎ,ಬಿ,ಸಿ,ಡಿ ಮತ್ತು ಇ ವಿಭಿನ್ನ ವೈರಸ್‌ಗಳಾಗಿದ್ದು,ವಿವಿಧ ರೀತಿಗಳಲ್ಲಿ ಹರಡುತ್ತವೆ. ಹೆಪಟೈಟಿಸ್ ಎ ಮತ್ತು ಇ ಕಲುಷಿತ ಆಹಾರ ಸೇವನೆಯಿಂದ ಹರಡಿದರೆ,ಹೆಪಟೈಟಿಸ್ ಬಿ ಮತ್ತು ಸಿ ರಕ್ತ ಮರುಪೂರಣ,ಅಸುರಕ್ಷಿತ ಲೈಂಗಿಕ ಕ್ರಿಯೆ ಮತ್ತು ಹಚ್ಚೆಗಳಿಂದ ಹರಡುತ್ತವೆ. ಹೆಪಟೈಟಿಸ್ ಡಿ ವೈರಸ್ ಹೆಪಟೈಟಿಸ್ ಬಿ ಪೀಡಿತರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ.
►ಹೆಪಟೈಟಿಸ್ ಎ ಭಾರತದಲ್ಲಿ ವಯಸ್ಕರಲ್ಲಿ ಹೆಪಟೈಟಿಸ್‌ಗೆ ಅತ್ಯಂತ ಸಾಮಾನ್ಯ ಕಾರಣವಾಗಿದೆ
ಭಾರತದಲ್ಲಿ ಶೇ.95 ರಷ್ಟು ಮಕ್ಕಳು ತಮ್ಮ 10 ವರ್ಷ ಪ್ರಾಯದಲ್ಲಿಯೇ ಹೆಪಟೈಟಿಸ್ ಎ ವೈರಸ್‌ಗೆ ಪಾಸಿಟಿವ್ ಆಗಿರುತ್ತಾರೆ. ಇದು ದೇಶದಲ್ಲಿಯ ಕಳಪೆ ನೈರ್ಮಲ್ಯ ಮತ್ತು ಆರೋಗ್ಯ ಸ್ಥಿತಿಯನ್ನು ಸೂಚಿಸುತ್ತದೆ. ಹೆಪಟೈಟಿಸ್ ಇ ವಯಸ್ಕರಲ್ಲಿ ತೀವ್ರ ವೈರಲ್ ಹೆಪಟೈಟಿಸ್ (ಎಡಬ್ಲುಎಚ್)ಗೆ ಅತ್ಯಂತ ಸಾಮಾನ್ಯ ಕಾರಣವಾಗಿದೆ. ಅನಾರೋಗ್ಯಕಾರಿ ಬೀದಿಬದಿ ಆಹಾರಗಳು ಈ ಕಾಯಿಲೆ ಹರಡಲು ಮುಖ್ಯ ಕಾರಣವಾಗಿವೆ.
►ಲಕ್ಷಣಗಳ ಆಧಾರದಲ್ಲಿ ಎಡಬ್ಲುಎಚ್‌ನ ವಿಭಿನ್ನ ವಿಧಗಳನ್ನು ಗುರುತಿಸಬಹುದು
ಎಡಬ್ಲುಎಚ್ ರೋಗಿಗಳಲ್ಲಿ ಸಣ್ಣಪ್ರಮಾಣದಲ್ಲಿ ಜ್ವರವು ಮೊದಲು ಕಾಣಿಸಿಕೊಳ್ಳುತ್ತದೆ,ನಂತರದಲ್ಲಿ ಹಸಿವು ಕ್ಷೀಣ,ಮೂತ್ರ ಗಾಢಬಣ್ಣಕ್ಕೆ ತಿರುಗುವುದು ಮತ್ತು ವಾಂತಿಯಂತಹ ಲಕ್ಷಣಗಳು ಪ್ರಕಟಗೊಳ್ಳುತ್ತವೆ. ಜಾಂಡಿಸ್ ಅಥವಾ ಕಾಮಾಲೆ ರೋಗವು 2-3 ವಾರಗಳ ಕಾಲ ಇರುತ್ತದೆ ಮತ್ತು ತೀವ್ರ ತುರಿಕೆಯೂ ಕಾಣಿಸಿಕೊಳ್ಳಬಹುದು. ಅನಾರೋಗ್ಯಕ್ಕೆ ಕಾರಣವಾದ ವೈರಸ್‌ನ ವಿಧವನ್ನು ರಕ್ತಪರೀಕ್ಷೆಗಳ ಮೂಲಕ ಮಾತ್ರ ಖಚಿತಪಡಿಸಬಹುದು.
►ಎಲ್ಲ ಎಡಬ್ಲುಎಚ್ ರೋಗಿಗಳು ಕಾಮಾಲೆಯನ್ನು ಹೊಂದಿರುತ್ತಾರೆ
ಕಾಮಾಲೆ ಇಲ್ಲವೆಂಬ ಮಾತ್ರಕ್ಕೆ ಎಡಬ್ಲುಎಚ್ ಸೋಂಕುಂಟಾಗಿರುವುದನ್ನು ತಳ್ಳಿಹಾಕುವಂತಿಲ್ಲ. ಅದು ಕೆಲವೊಮ್ಮೆ ಜ್ವರ,ವಾಂತಿ,ಹಸಿವು ಕ್ಷೀಣ,ಬಳಲಿಕೆ ಇತ್ಯಾದಿ ಲಕ್ಷಣಗಳನ್ನು ಮಾತ್ರ ತೋರಿಸಬಹುದು.
►ಹೆಪಟೈಟಿಸ್ ಹೆತ್ತವರಿಂದ ಮಕ್ಕಳಿಗೆ ಹರಡುವ ವಂಶವಾಹಿ/ಆನುವಂಶಿಕ ರೋಗವಾಗಿದೆ.
ಹೆಪಟೈಟಿಸ್ ವಂಶವಾಹಿ ರೋಗವಲ್ಲ,ಅದು ಆನುವಂಶಿಕ ಕಾಯಿಲೆಯೂ ಅಲ್ಲ. ಆದರೆ ಕೆಲವೊಮ್ಮೆ ಹೆರಿಗೆ ಸಂದರ್ಭಗಳಲ್ಲಿ ಹೆಪಟೈಟಿಸ್ ಬಿ ವೈರಸ್ ತಾಯಿಯಿಂದ ಮಗುವಿಗೆ ಹರಡುತ್ತದೆ. ತಾಯಿಯ ಹೆಪಟೈಟಿಸ್ ವೈರಸ್ ಸ್ಥಿತಿಗತಿ ತಿಳಿದಿದ್ದರೆ ನವಜಾತ ಶಿಶುವಿಗೆ ಹುಟ್ಟಿದ 12 ಗಂಟೆಗಳಲ್ಲಿ ಪ್ರತಿಜೀವಕದಂತೆ ಕಾರ್ಯ ನಿರ್ವಹಿಸುವ ಇಮ್ಯುನೊಗ್ಲೋಬುಲಿನ್ ಮತ್ತು ಲಸಿಕೆಯನ್ನು ನೀಡಿದರೆ ತಾಯಿಯಿಂದ ಮಗುವಿಗೆ ವೈರಸ್ ಹರಡುವಿಕೆಯನ್ನು ತಡೆಯಬಹುದು.
►ಹೆಪಟೈಟಿಸ್ ವೈರಸ್ ಎ ಮತ್ತು ಇ ಕುಟುಂಬದೊಳಗೇ ಹರಡಬಲ್ಲವು
ಹೆಪಟೈಟಿಸ್ ಅಥವಾ ಯಕೃತ್ತಿನ ಉರಿಯೂತ ಆರಂಭವಾದ ಬಳಿಕ ಕಾಮಾಲೆ ಕಾಣಿಸಿಕೊಳ್ಳುವ ವೇಳೆಗಾಗಲೇ ರೋಗಿಯ ಮಲದಲ್ಲಿ ವೈರಸ್‌ಗಳ ವಿಸರ್ಜನೆ ನಿಂತಿರುತ್ತದೆ ಮತ್ತು ಆತ ಅಸಾಂಕ್ರಾಮಿಕವಾಗಿರುತ್ತಾನೆ. ಹೆಪಟೈಟಿಸ್ ಇ ಸಾಮಾನ್ಯವಾಗಿ ನೀರಿನ ಮೂಲವು ಚರಂಡಿ ತ್ಯಾಜ್ಯಗಳಿಂದ ಕಲುಷಿತಗೊಂಡಾಗ ಮಾನವನ ಶರೀರಕ್ಕೆ ದಾಳಿಯಿಡುತ್ತದೆ.
►ಎಲ್ಲ ವಿಧಗಳ ಹೆಪಟೈಟಿಸ್ ವೈರಸ್‌ಗಳ ವಿರುದ್ಧ ರಕ್ಷಣೆಗಾಗಿ ಲಸಿಕೆಗಳು ಲಭ್ಯವಿವೆ
ಹೆಪಟೈಟಿಸ್ ಎ ಮತ್ತು ಬಿ ವಿರುದ್ಧ ಮಾತ್ರ ಲಸಿಕೆಗಳು ಲಭ್ಯವಿವೆ.
►ಒಮ್ಮೆ ಹೆಪಟೈಟಿಸ್ ಎ ಕಾಡಿತೆಂದರೆ ಇತರ ವಿಧಗಳ ಹೆಪಟೈಟಿಸ್‌ಗೆ ನಿರೋಧಕ ಶಕ್ತಿಯುಂಟಾಗುತ್ತದೆ
ಹೆಪಟೈಟಿಸ್ ಎ ರೋಗಿಗಳು ಲಸಿಕೆಗಳ ಮೂಲಕ ಜೀವನ ಪರ್ಯಂತ ಹೆಪಟೈಟಿಸ್ ಎ ವಿರುದ್ಧ ಮಾತ್ರವೇ ರಕ್ಷಣೆಯನ್ನು ಹೊಂದಿರುತ್ತಾರೆ ಮತ್ತು ಬಿ,ಸಿ ಮತ್ತು ಇ ವಿಧಗಳಂತಹ ಇತರ ರೂಪಗಳ ಹೆಪಟೈಟಿಸ್‌ನ ಅಪಾಯವನ್ನು ಎದುರಿಸುತ್ತಿರುತ್ತಾರೆ.
►ಹೆಪಟೈಟಿಸ್ ವೈರಸ್ ಮಾನವನ ಶರೀರದ ಹೊರಗೆ ಬದುಕಿರುವುದಿಲ್ಲ
ಹೆಪಟೈಟಿಸ್ ಬಿ ವೈರಸ್ ಹೆಪಟೈಟಿಸ್ ಸಿ ವೈರಸ್‌ಗಿಂತ 10 ಪಟ್ಟು ಮತ್ತು ಎಚ್‌ಐವಿಗಿಂತ 100 ಪಟ್ಟು ಹೆಚ್ಚು ಸೋಂಕುಕಾರಕವಾಗಿದೆ. ಅದು ಒಣರಕ್ತದಲ್ಲಿ ಏಳು ದಿನಗಳವರೆಗೆ ಬದುಕಿರಬಲ್ಲದು ಮತ್ತು ಸೋಂಕನ್ನುಂಟು ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೆಪಟೈಟಿಸ್ ಸಿ ವೈರಸ್ ರೋಗಿಯ ಎಂಜಲು ಬೇರೊಬ್ಬರ ಕಣ್ಣಿನ ಆರ್ದ್ರ ಚರ್ಮಕ್ಕೆ ಸಿಡಿದರೂ ವೈರಸ್ ಹರಡುತ್ತದೆ.
►ಹೆಪಟೈಟಿಸ್ ರೋಗಿಯು ಮೃದುವಾದ ಮತ್ತು ಚೆನ್ನಾಗಿ ಬೇಯಿಸಿದ ಆಹಾರವನ್ನು ಮಾತ್ರ ಸೇವಿಸಬೇಕು
ಹೆಪಟೈಟಿಸ್ ಉಂಟಾದ ಸಂದರ್ಭಗಳಲ್ಲಿ ಒಳ್ಳೆಯ ಪೋಷಕಾಂಶಗಳ ಸೇವನೆ ಮುಖ್ಯವಾಗಿದೆ. ವಾಂತಿ ಮತ್ತು ವಾಕರಿಕೆ ಇದ್ದ ಸಂದರ್ಭದಲ್ಲಿ ರೋಗಿಯು ಏನನ್ನು ತಿನ್ನಲು ಬಯಸುತ್ತಾನೋ ಅದನ್ನೇ ನೀಡಬೇಕು. ಗ್ಲುಕೋಸ್ ದ್ರಾವಣ,ಕಬ್ಬಿನ ರಸ,ಹಾಗಲ ಮತ್ತು ಮೂಲಂಗಿ ಇವುಗಳಿಂದ ರೋಗಿಯು ದೂರವಿರಬೇಕು. ಅರಿಷಿಣವು ಉರಿಯೂತ ನಿವಾರಕ ಗುಣಗಳನ್ನು ಹೊಂದಿರುವುದರಿಂದ ಅದರ ಸೇವನೆಯನ್ನು ನಿರ್ಬಂಧಿಸಬೇಕಿಲ್ಲ.
►ಹೆಪಟೈಟಿಸ್ ಇರುವ ತಾಯಂದಿರು ಮಕ್ಕಳಿಗೆ ಹಾಲುಣಿಸಬಾರದು
ಹೆಪಟೈಟಿಸ್ ವೈರಸ್ ಎದೆಹಾಲಿನಿಂದ ಮಗುವಿಗೆ ಹರಡುವುದಿಲ್ಲ. ಹೀಗಾಗಿ ಹೆಪಟೈಟಿಸ್‌ನಿಂದ ಬಳಲುತ್ತಿರುವ ತಾಯಂದಿರು ನಿರಾಳವಾಗಿ ಮಕ್ಕಳಿಗೆ ಹಾಲುಣಿಸಬಹುದು.
►ಪಾರ್ಲರ್‌ಗಳಲ್ಲಿ ಹಚ್ಚೆ ಹಾಕಿಸುವಿಕೆ ಮತ್ತು ಚುಚ್ಚಿಸುವಿಕೆಯಿಂದ ಹೆಪಟೈಟಿಸ್ ಬಿ ಮತ್ತು ಸಿ ಹರಡುವುದಿಲ್ಲ
ಹಚ್ಚೆ ಹಾಕುವಿಕೆ,ಕಿವಿ ಮತ್ತು ಮೂಗು ಚುಚ್ಚುವಿಕೆ,ಫೇಸ್ ಕ್ಲೀನಿಂಗ್,ಮ್ಯಾನಿಕ್ಯೂರ್,ಪಿಡಿಕ್ಯೂರ್ ಮಾಡುವ ವೇಳೆ ಹರಿತವಾದ ಉಪಕರಣಗಳು ಸ್ಟರಿಲೈಜ್ ಆಗಿರದಿದ್ದರೆ ವೈರಸ್‌ಗಳು ಒಬ್ಬರಿಂದೊಬ್ಬರಿಗೆ ಹರಡಬಹುದು.