ಮಕ್ಕಳ ಗ್ರೈಪ್‌ವಾಟರ್ ದೊಡ್ಡವರಿಗೂ ಆರೋಗ್ಯಲಾಭಗಳನ್ನು ನೀಡುತ್ತದೆ ಗೊತ್ತೇ?

Update: 2019-12-19 18:35 GMT

ಗ್ರೈಪ್‌ವಾಟರ್‌ನ ಹೆಸರನ್ನು ಕೇಳದವರಿಲ್ಲ. ಆರೋಗ್ಯಕರ ಬೆಳವಣಿಗೆಗಾಗಿ ತಾಯಂದಿರು ಅದೆಷ್ಟೋ ವರ್ಷಗಳಿಂದ ಮಕ್ಕಳಿಗೆ ಗ್ರೈಪ್‌ವಾಟರ್ ಕುಡಿಸುತ್ತಲೇ ಬಂದಿದ್ದಾರೆ. ಆದರೆ ಗ್ರೈಪ್ ವಾಟರ್ ಮಕ್ಕಳಿಗೆ ಮಾತ್ರವಲ್ಲ,ದೊಡ್ಡವರಿಗೂ ಆರೋಗ್ಯಲಾಭಗಳನ್ನು ನೀಡುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಗ್ರೈಪ್ ವಾಟರ್ ಕಹಿರುಚಿಯನ್ನು ಹೊಂದಿರುವುದರಿಂದ ಕಹಿಯ ತೀವ್ರತೆಯನ್ನು ತಗ್ಗಿಸಲು ನೀರನ್ನು ಬೆರೆಸಿ ಸೇವಿಸಲಾಗುತ್ತದೆ. ಶಿಶುಗಳಿಗೆ ಮತ್ತು ದೊಡ್ಡವರಿಗೆ ಗ್ರೈಪ್‌ವಾಟರ್ ನೀಡುವ ಆರೋಗ್ಯಲಾಭಗಳು ಇಲ್ಲಿವೆ......

ಹೊಟ್ಟೆನೋವಿನಿಂದ ಮುಕ್ತಿ ನೀಡುತ್ತದೆ

ಶಿಶುಗಳು ದುರ್ಬಲ ಮತ್ತು ಸಂವೇದನಾಶೀಲ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಿರುವುದರಿಂದ ಹೊಟ್ಟೆನೋವುಗಳಿಗೆ ಸುಲಭವಾಗಿ ತುತ್ತಾಗುತ್ತವೆ. ಮಕ್ಕಳಿಗೆ ಹೋಲಿಸಿದರೆ ದೊಡ್ಡವರು ಜಠರಗರುಳು ಸಮಸ್ಯೆಗಳಿಗೆ ಸಾಕಷ್ಟು ನಿರೋಧಕತೆಯನ್ನು ಹೊಂದಿದ್ದಾರಾದರೂ ಅವರ ಜೀರ್ಣ ಸಮಸ್ಯೆಗಳನ್ನೂ ಗ್ರೈಪ್ ವಾಟರ್ ಸೇವನೆಯಿಂದ ಗುಣಪಡಿಸಬಹುದು.

ಜೀರ್ಣಾಂಗದ ಮೇಲೆ ನಿಗಾಯಿರಿಸುತ್ತದೆ

ಮೂಲಿಕೆಗಳಿಂದ ಸಮೃದ್ಧವಾಗಿರುವ ಗ್ರೈಪ್ ವಾಟರ್‌ನ್ನು ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಶಾಶ್ವತವಾಗಿ ಗುಣಪಡಿಸಲು ಬಳಸಬಹುದು. ಮೂಲಿಕೆಗಳ ಸತ್ವವನ್ನು ಹೊಂದಿರುವುದರಿಂದ ಜೀರ್ಣ ಪ್ರಕ್ರಿಯೆಯ ಮೇಲೆ ಕಣ್ಣಿರಿಸುತ್ತದೆ, ಅದನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮ ಸ್ಥಿತಿಯಲ್ಲಿರಿಸುತ್ತದೆ.

ಉದರಶೂಲೆ ಮತ್ತು ಆಮ್ಲೀಯತೆಯಿಂದ ಪಾರಗಲು ನೆರವಾಗುತ್ತದೆ

ಗ್ರೈಪ್ ವಾಟರ್ ಜಠರದ ಮೇಲೆ ಶಾಮಕ ಪರಿಣಾಮವನ್ನು ಬೀರುತ್ತದೆ ಮತ್ತು ಶಿಶುಗಳು ಹೊಟ್ಟೆನೋವಿನಿಂದ ನರಳುತ್ತಿದ್ದರೆ ಅದರಿಂದ ಶಮನವನ್ನು ನೀಉತ್ತದೆ. ದೊಡ್ಡವರು ಆ್ಯಸಿಡಿಟಿಯಿಂದ ಬಳಲುತ್ತಿದ್ದರೆ ಗ್ರೈಪ್ ವಾಟರ್ ರಾಮಬಾಣದಂತೆ ಕೆಲಸಮಾಡುತ್ತದೆ.

ಗ್ರೈಪ್‌ವಾಟರ್ ಏಕೆ ಆರೋಗ್ಯಕರವಾಗಿದೆ?

ಗ್ರೈಪ್ ವಾಟರ್‌ನಲ್ಲಿರುವ ಘಟಕಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ ಈ ಪ್ರಶ್ನೆಗೆ ಉತ್ತರವು ಸಿಗುತ್ತದೆ. ಅದು ಮೂಲಿಕೆಗಳಿಂದ ತುಂಬಿರುವುದರಿಂದ ಶಿಶುಗಳ ಸೇವನೆಗೆ ಮತ್ತು ಮದ್ದಿನ ರೂಪದಲ್ಲಿ ದೊಡ್ಡವರ ಸೇವನೆಗೂ ಸುರಕ್ಷಿತವಾಗಿದೆ. ಈ ಘಟಕಗಳ ವಿವರಗಳಿಲ್ಲಿವೆ.

ಸೋಡಿಯಂ ಬೈಕಾರ್ಬನೇಟ್: ಆಮ್ಲೀಯತೆಯನ್ನು ನಿವಾರಿಸಲು ಹಲವಾರು ಆ್ಯಂಟಾಸಿಡ್‌ಗಳಲ್ಲಿ ಸೋಡಿಯಂ ಬೈಕಾರ್ಬನೇಟ್ ಬಳಕೆಯಾಗುತ್ತದೆ. ಅದರಿಂದ ಇತರ ಯಾವುದೇ ಲಾಭವಿಲ್ಲವಾದರೂ ಅಡ್ಡಪರಿಣಾಮಗಳು ಕನಿಷ್ಠವಾಗಿವೆ.

 ಬಡೆಸೊಪ್ಪು: ಗ್ರೈಪ್‌ವಾಟರ್‌ನಲ್ಲಿರುವ ಸೋಂಪು ಅಥವಾ ಬಡೆಸೊಪ್ಪು ನಾರು,ವಿಟಾಮಿನ್‌ಗಳು ಮತ್ತು ಕಬ್ಬಿಣವನ್ನು ಸಮೃದ್ಧವಾಗಿ ಒಳಗೊಂಡಿದೆ. ಅದರಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಸಸ್ಯಜನ್ಯ ಸಂಯುಕ್ತಗಳು ಅದಕ್ಕೆ ಔಷಧೀಯ ಗುಣವನ್ನು ನೀಡಿವೆ.

ಶುಂಠಿ: ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಜೊತೆಗೆ ಶುಂಠಿಯು ವಾಕರಿಕೆ,ಬೆಳಗಿನ ಅಸ್ವಸ್ಥತೆಯನ್ನು ಕಡಿಮೆಗೊಳಿಸುತ್ತದೆ ಮತ್ತು ಅಸ್ಥಿರಂಧ್ರತೆ ಪ್ರಕರಣಗಳಲ್ಲಿ ಉರಿಯತ ನಿರೋಧಕವಾಗಿ ಕೆಲಸ ಮಾಡುತ್ತದೆ,

ಕ್ಯಾಮೊಮೈಲ್: ಇದು ಅಮೆರಿಕ ಮೂಲದ ಔಷಧೀಯ ಸಸ್ಯವಾಗಿದ್ದು, ಮನಸ್ಸಿಗೆ ನೆಮ್ಮದಿ ನೀಡಿ ಸುಖನಿದ್ರೆಯನ್ನು ಒದಗಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಮಹಿಳೆಯರಲ್ಲಿ ಮುಟ್ಟಿನ ದಿನಗಳ ನೋವನ್ನು ಕಡಿಮೆ ಮಾಡುತ್ತದೆ.

ಈ ಪ್ರಮುಖ ಘಟಕಗಳಲ್ಲದೆ ಲವಂಗ,ದಾಲ್ಚಿನ್ನಿ,ಯಾಲಕ್ಕಿ,ಸಬ್ಬಸಿಗೆ,ಪುದೀನಾ ಇತ್ಯಾದಿಗಳನ್ನು ಗ್ರೈಪ್‌ವಾಟರ್ ಒಳಗೊಂಡಿದೆ. ಗ್ರೈಪ್ ವಾಟರ್‌ನ್ನು ಮನೆಯಲ್ಲಿಯೂ ತಯಾರಿಸಬಹುದು,ಆದರೆ ಈ ಘಟಕಗಳ ಸರಿಯಾದ ಪ್ರಮಾಣ ಗಮನದಲ್ಲಿರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News