ಮಧುಮೇಹದಲ್ಲಿ HbA1c ಎಂದರೇನು ಮತ್ತು ಅದನ್ನು ಏಕೆ ಮಾಡಲಾಗುತ್ತದೆ?

Update: 2020-08-28 12:50 GMT

HbA1c ಅಥವಾ ಗ್ಲೈಕೇಟೆಡ್ ಹಿಮೊಗ್ಲೋಬಿನ್ ಅಥವಾ ಗ್ಲೈಕೊಹಿಮೊಗ್ಲೋಬಿನ್ ಮಧುಮೇಹ ರೋಗಿಗಳ ಆರೋಗ್ಯದಲ್ಲಿ ಮುಖ್ಯ ಪಾತ್ರವನ್ನು ಹೊಂದಿದೆ. 2-3 ತಿಂಗಳ ಅವಧಿಗೆ ರಕ್ತದಲ್ಲಿಯ ಸಕ್ಕರೆ ಮಟ್ಟಗಳ ಮೇಲೆ ನಿಗಾಯಿರಿಸಲು  HbA1c

 ಪರೀಕ್ಷೆಯನ್ನು ನಡೆಸಲಾಗುತ್ತದೆ. ರಕ್ತದಲ್ಲಿಯ ಸಕ್ಕರೆಯ ಮಟ್ಟವು ನಿರೀಕ್ಷಿತ ಮಿತಿಗಳಲ್ಲಿ ಇದೆಯೇ ಎನ್ನುವುದನ್ನು ನಿರ್ಧರಿಸಲು ಮತ್ತು ಅಗತ್ಯವಾದರೆ ವೈದ್ಯರು ಔಷಧಿಗಳಲ್ಲಿ ಬದಲಾವಣೆ ಮಾಡಲು ನೆರವಾಗುವುದರಿಂದ ಈ ಪರೀಕ್ಷೆಯು ಮಧುಮೇಹದಲ್ಲಿ ಮುಖ್ಯವಾಗಿದೆ. ಆರೋಗ್ಯವಂತ ವ್ಯಕ್ತಿಯಲ್ಲಿ ಮಧುಮೇಹ ರೋಗನಿರ್ಣಯಕ್ಕೂ ಈ ಪರೀಕ್ಷೆಯು ನೆರವಾಗುತ್ತದೆ.

HbA1c HbA1c ಎಂದರೇನು?

HbA1c ಗ್ಲೈಕೇಟೆಡ್ ಹಿಮೊಗ್ಲೋಬಿನ್‌ನ ಸಂಕ್ಷಿಪ್ತ ರೂಪವಾಗಿದೆ. Hb ಹಿಮೊಗ್ಲೋಬಿನ್ ಅನ್ನು ಸೂಚಿಸಿದರೆ ಹಿಮೊಗ್ಲೋಬಿನ್‌ನ A1c  ಮಾದರಿಯನ್ನು ಸೂಚಿಸುತ್ತದೆ.

ಗ್ಲುಕೋಸ್ ಕಣಗಳು ಹಿಮೊಗ್ಲೋಬಿನ್ ಜೊತೆ ಸಂಯೋಜನೆಗೊಂಡಾಗ ಗ್ಲೈಕೇಟೆಡ್ ಹಿಮೊಗ್ಲೋಬಿನ್ ತಯಾರಾಗುತ್ತದೆ. ಈ ಸಂಯೋಜನೆಯು ರಕ್ತದಲ್ಲಿರುವ ಸಕ್ಕರೆಯ ಪ್ರಮಾಣಕ್ಕೆ ಅನುಗುಣವಾಗಿರುತ್ತದೆ. ಹೀಗಾಗಿ ಈ ಪರೀಕ್ಷೆಯು ರಕ್ತದಲ್ಲಿಯ ಗ್ಲುಕೋಸ್‌ನ ಸಾಂದ್ರತೆಯನ್ನು ಅಳತೆ ಮಾಡಲು ನೆರವಾಗುತ್ತದೆ. ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾದಾಗ ಕೆಂಪು ರಕ್ತಕಣಗಳು ಸಿಹಿಯಾಗುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ ಗ್ಲೈಕೇಟೆಡ್ ಹಿಮೊಗ್ಲೋಬಿನ್‌ನ ಮಟ್ಟವು ಹೆಚ್ಚಿದ್ದಾಗ ವ್ಯಕ್ತಿಯು ಮಧುಮೇಹವನ್ನು ಹೊಂದಿದ್ದಾನೆ ಎನ್ನುವುದು ಖಚಿತವಾಗುತ್ತದೆ. ಕಡಿಮೆ ಮಟ್ಟವು ವ್ಯಕ್ತಿಯು ಆರೋಗ್ಯವಂತ ನಾಗಿದ್ದಾನೆ ಮತ್ತು ಆತನಿಗೆ ಮಧುಮೇಹ ಇಲ್ಲ ಎಂದು ಸೂಚಿಸುತ್ತದೆ.

HbA1cನ ಜೀವಿತಾವಧಿ ಎಷ್ಟು?

ಹಿಮೊಗ್ಲೋಬಿನ್ ಕೆಂಪು ರಕ್ತಕಣಗಳಲ್ಲಿರುವ ಪ್ರೋಟಿನ್ ಆಗಿದ್ದು,ನಮ್ಮ ರಕ್ತಕ್ಕೆ ಕೆಂಪು ವರ್ಣವನ್ನು ನೀಡುತ್ತದೆ. ಹಿಮೊಗ್ಲೋಬಿನ್‌ನ ಜೀವಿತಾವಧಿಯು 3ರಿಂದ 4 ತಿಂಗಳಗಳಾಗಿದ್ದು,ಬಳಿಕ ಪುನರ್‌ಸೃಷ್ಟಿಗೊಳ್ಳುತ್ತದೆ. HbA1c ಪರೀಕ್ಷೆಯು ಕಳೆದ 3-4 ತಿಂಗಳುಗಳಲ್ಲಿಯ ಸರಾಸರಿ ಗ್ಲುಕೋಸ್ ಮಟ್ಟವನ್ನು ಅಳೆಯುತ್ತದೆ.

HbA1c ಮಧುಮೇಹಿಯಲ್ಲಿ ಮೇಲೆ ಏಕೆ ನಿಗಾಯಿಡಬೇಕು?

ಈಗಾಗಲೇ ವಿವರಿಸಿರುವಂತೆ  HbA1c ಪರೀಕ್ಷೆಯು ಗ್ಲೈಕೇಟೆಡ್ ಹಿಮೊಗ್ಲೋಬಿನ್‌ನ ಸಾಂದ್ರತೆಯನ್ನು ಅಳೆಯುತ್ತದೆ. ಹೀಗಾಗಿ ಮಧುಮೇಹ ಸ್ಥಿತಿಯ ಮೇಲೆ ನಿಗಾಯಿಡಲು ಅದನ್ನು ಒಂದು ಮಾನದಂಡವನ್ನಾಗಿ ಪರಿಗಣಿಸಲಾಗಿದೆ. ಸರಾಸರಿ ಮಟ್ಟವನ್ನು ಕಂಡುಕೊಳ್ಳಲು ಗ್ಲುಕೋಸ್ ಮಟ್ಟದಲ್ಲಿಯ ಎಲ್ಲ ಏರಿಳಿತಗಳನ್ನು ದಾಖಲಿಸಿಕೊಳ್ಳಲು ಅದು ನೆರವಾಗುತ್ತದೆ. ಗ್ಲೈಸೆಮಿಕ್ ನಿಯಂತ್ರಣದ ಸಂಕ್ಷಿಪ್ತ ನೋಟವನ್ನು ಹೊಂದುವದು,ಸ್ಥಿತಿಯ ಮೇಲೆ ನಿಗಾಯಿರಿಸುವುದು ಮತ್ತು ಚಿಕಿತ್ಸೆಯಲ್ಲಿ ಪರಿಷ್ಕರಣೆ ಮಾಡುವುದು ಹಾಗೂ ಮಧುಮೇಹದ ಅಪಾಯಗಳು ಉಂಟಾಗುವ ಬಗ್ಗೆ ವಿಶ್ಲೇಷಣೆ ನಡೆಸುವುದು ಇವು ಈ ಪರೀಕ್ಷೆಯ ಉದ್ದೇಶಗಳಾಗಿವೆ.

ಹೀಗಾಗಿ ಮಧುಮೇಹ ರೋಗಿ ಪ್ರತಿ 3-4 ತಿಂಗಳಿಗೊಮ್ಮೆ ಈ ಪರೀಕ್ಷೆಯನ್ನು ಮಾಡಿಸುವುದು ಅಗತ್ಯವಾಗಿದೆ. ಇದರಿಂದ ರಕ್ತದಲ್ಲಿ ಸಕ್ಕರೆ ಮಟ್ಟದ ಮೇಲೆ ನಿಗಾಯಿರಿಸಲು ಮತ್ತು ಹೆಚ್ಚಿನ ಸಕ್ಕರೆ ಮಟ್ಟದಿಂದಾಗಿ ಉದ್ಭವಿಸುವ ಸಮಸ್ಯೆಗಳನ್ನು ತಡೆಯಲು ಸಾಧ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News