2020ರಲ್ಲಿ ವಿದೇಶಗಳಿಗೆ ಹಣ ಕಳುಹಿಸಲು 26,300 ಕೋಟಿ ರೂ. ವಿದೇಶಿ ವಿನಿಮಯ ಶುಲ್ಕ ಪಾವತಿಸಿದ ಭಾರತೀಯರು
ಹೊಸದಿಲ್ಲಿ,ಅ.30: ಕೋವಿಡ್-19 ಸೋಂಕಿನ ಹಾವಳಿಯ ಹೊರತಾಗಿಯೂ ಇತರ ದೇಶಗಳಿಗೆ ಹಣವನ್ನು ಕಳುಹಿಸಿರುವ ಭಾರತೀಯರು ಒಟ್ಟು 26.300 ಕೋಟಿ ರೂ.ಗಳನ್ನು ವಿದೇಶಿ ವಿನಿಮಯ ಶುಲ್ಕವಾಗಿ ಪಾವತಿಸಿದ್ದಾರೆ ಎಂದು ಗುರುವಾರ ವರದಿ ತಿಳಿಸಿದೆ.
ಭಾರತೀಯರು ವಿದೇಶಿ ವಿನಿಮಯ ಶುಲ್ಕವಾಗಿ ಪಾವತಿಸುತ್ತಿರುವ ಹಣದ ಮೊತ್ತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳ ಕಂಡುಬರುತ್ತಿದೆ. 2020ರಲ್ಲಿ ಭಾರತೀಯರು 26.300 ಕೋಟಿ ರೂ. ವಿದೇಶಿ ವಿನಿಮಯ ಶುಲ್ಕ ಪಾವತಿಸಿದ್ದರೆ, 2016ರಲ್ಲಿ ಅದು 18,700 ಕೋಟಿ ರೂ ಆಗಿತ್ತು ಎಂದು ಅಧ್ಯಯನ ವರದಿ ಯೊಂದು ತಿಳಿಸಿದೆ.
ಲಂಡನ್‌ನ ಶೇರುಮಾರುಕಟ್ಟೆಯಲ್ಲಿ ನೋಂದಣಿಯಾಗಿರುವ ವೈಸ್ ಎಂಬ ಕಂಪೆನಿಯ ಪ್ರಾಯೋಜಕತ್ವದೊಂದಿಗೆ ಕ್ಯಾಪಿಟಲ್ ಇಕಾನಾಮಿಕ್ಸ್ 2021ರ ಆಗಸ್ಟ್‌ನಲ್ಲಿ ವರದಿಯನ್ನು ತಯಾರಿಸಿತ್ತು.
ಆದಾಗ್ಯೂ ಕಳೆದ ಐದು ವರ್ಷದಲ್ಲಿ ವಿದೇಶಕ್ಕೆ ಹಣ ಕಳುಹಿಸುವುದಕ್ಕಾಗಿ ಪಾವತಿಸಲಾಗುವ ಎಲ್ಲಾ ವಹಿವಾಟು ಶುಲ್ಕಗಳಿಗೆ ಭಾರತೀಯರು ಖರ್ಚು ಮಾಡುವ ವೆಚ್ಚದಲ್ಲಿ ಕಳೆದ ಐದು ವರ್ಷಗಳಲ್ಲಿ ಇಳಿಕೆಯುಂಟಾಗಿದೆ ಎಂದು ವರದಿ ತಿಳಿಸಿದೆ.