ಜಾಗತಿಕ ಸಮಸ್ಯೆಗಳ ಪರಿಹಾರಕ್ಕೆ ಭಾರತವೂ ಕೈಜೋಡಿಸಲಿ: ಡಾ.ಹಂದೆ
ಮಣಿಪಾಲ, ಜ.19: ವಿಶ್ವಸಂಸ್ಥೆಯು 2030ರಲ್ಲಿ ಸಾಧಿಸುವ ಗುರಿ ಇರಿಸಿಕೊಂಡ ‘ಎಸ್‌ಜಿಎಸ್’ ಸುಸ್ಥಿರ ಅಭಿವೃದ್ಧಿ ನೀತಿಯಲ್ಲಿ ಹವಾಮಾನ ಬದಲಾವಣೆ, ಇಂಧನ ಹಾಗೂ ಬರ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಭಾರತವೂ ಮುಂದಾಗಬೇಕು ಎಂದು ಮ್ಯಾಗ್ಸಸೆ ಪ್ರಶಸ್ತಿ ವಿಜೇತ ಸೌರವಿದ್ಯುತ್ ಸಾಧಕ ಹಾಗೂ ಸೆಲ್ಕೋ ಸೋಲಾರ್ ಲೈಟ್ಸ್‌ನ ಸ್ಥಾಪಕ ಅಧ್ಯಕ್ಷ ಡಾ.ಹರೀಶ್ ಹಂದೆ ಹೇಳಿದ್ದಾರೆ.
ಮಣಿಪಾಲದ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ) ಹಾಗೂ ಮಾಹೆ ಮಣಿಪಾಲದ ಹೊಟೇಲ್ ವ್ಯಾಲಿವ್ಯೆ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ಥಾಪಕರ ದಿನಾಚರಣೆ ಹಾಗೂ 39ನೇ ಟಿ.ಎ.ಪೈ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡುತಿದ್ದರು.
ಈಗ ಜಾಗತಿಕ ಸಮಸ್ಯೆಗಳಾಗಿರುವ ಜಲಕ್ಷಾಮ, ಹವಾಮಾನ ವೈಫರಿತ್ಯ, ಇಂಧನ ಮುಂತಾದವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮಣಿಪಾಲದ ಟ್ಯಾಪ್ಮಿ, ಮಾಹೆ ಹಾಗೂ ಬಿವಿಟಿಯಂಥ ಸಂಸ್ಥೆಗಳೂ ಕೈಜೋಡಿಸಬಹುದು. ದಶಕಗಳ ಹಿಂದೆ ಬಯೋಗ್ಯಾಸ್‌ಗೆ ಉತ್ತೇಜನ ನೀಡಿದ ಟಿ.ಎ.ಪೈ ಅವರು ಇಂದು ಕೊರೋನ ಹಿನ್ನೆಲೆಯಲ್ಲಿ ಉದ್ಘವಿಸಿರುವ ಸಮಸ್ಯೆಗಳಿಗೆ ಮಾರ್ಗಸೂಚಕರಂತೆ ಭಾಸವಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.
ಎರಡು ವರ್ಷಗಳಿಂದ ಕಾಡುತ್ತಿರುವ ಕೊರೋನದಿಂದಾಗಿ ಭಾರತದಲ್ಲಿ 16ಕೋಟಿಗೂ ಅಧಿಕ ಮಂದಿ ಬಡತನದ ರೇಖೆಗಿಂತ ಕೆಳಗಿಳಿದಿದ್ದಾರೆ. ಇಂಥ ಸಂದರ್ಭದಲ್ಲಿ ಟಿ.ಎ.ಪೈ ತೋರಿದ ಎಲ್ಲರನ್ನೂ ಒಳಗೊಳ್ಳುವ (ಇನ್‌ಕ್ಲೂಸಿವ್) ನೀತಿ ನಮಗಿಂದು ಬೇಕಾಗಿದೆ. ದೇಶವನ್ನು ಸಮಸ್ಯೆಗಳಿಂದ ಪಾರು ಮಾಡುವ ಯೋಚನಾಕ್ರಮ ಇದಾಗಿದೆ ಎಂದು ಡಾ.ಹಂದೆ ನುಡಿದರು.
ಗೌರವ ಅತಿಥಿಯಾಗಿ ಭಾಗವಹಿಸಿದ್ದ ಶ್ರೀಧರ್ಮಸ್ಥಳ ಗ್ರಾಾಮಾಭಿವೃದ್ಧಿಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್, ಟಿ.ಎ.ಪೈ ಅವರ ದೂರದೃಷ್ಟಿಯ ಫಲವಾಗಿಯೇ ಕ್ಷೀರ ಕ್ಷಾಮ ವಿದ್ದ ಕರಾವಳಿ ಜಿಲ್ಲೆೆಯಲ್ಲೀಗ ನಿತ್ಯ 6 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಲಾಭದಲ್ಲಿ, ಗುಣಮಟ್ಟದಲ್ಲಿ ದ.ಕ. ಹಾಲು ಒಕ್ಕೂಟ ಮುಂಚೂಣಿಯಲ್ಲಿರಲೂ ಕೆನರಾ ಮಿಲ್ಕ್ ಯೂನಿಯನ್ ಮೂಲಕ ಪೈಯವರು ಹಾಕಿಕೊಟ್ಟ ಭದ್ರಬುನಾದಿ ಕಾರಣ ಎಂದು ನುಡಿದರು.
ಕೇಂದ್ರದ ಮಾಜಿ ಸಚಿವರಾಗಿದ್ದ ಟಿ.ಎ.ಪೈ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಅಂಚೆ ಇಲಾಖೆ ಹೊರತಂದ ವಿಶೇಷ ಲಕೋಟೆ ಮತ್ತು ಅಂಚೆ ಚೀಟಿಯನ್ನು ಕರ್ನಾಟಕ ವೃತ್ತದ ಚೀಫ್ ಪೋಸ್ಟ್‌ಮಾಸ್ಟರ್ ಜನರಲ್ ಶಾರದಾ ಸಂಪತ್ ಬಿಡುಗಡೆಗೊಳಿಸಿದರು.
ಮಾಹೆಯ ಪ್ರೊ. ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಮಹಿಳಾ ಸಬಲೀಕರಣ ಹಾಗೂ ಕೃಷಿ ಸಾಲ ನೀಡಿಕೆಯಲ್ಲಿ ತೋರಿದ ಮಾನವೀಯತೆಗಾಗಿ ಟಿ.ಎ.ಪೈ ಯಾವತ್ತೂ ಸ್ಮರಣೀಯರಾಗಿರುತ್ತಾರೆ. ಮುಂದಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಇಂತಹ ವ್ಯಕ್ತಿಗಳು ಶತಮಾನಕ್ಕೆೆ ಒಮ್ಮೆ ಹುಟ್ಟುತ್ತಾರೆ ಎಂದರು.
ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಮಹಿಳಾ ಸಬಲೀಕರಣ ಹಾಗೂ ಕೃಷಿ ಸಾಲ ನೀಡಿಕೆಯಲ್ಲಿ ತೋರಿದ ಮಾನವೀಯತೆಗಾಗಿ ಟಿ.ಎ.ಪೈ ಯಾವತ್ತೂ ಸ್ಮರಣೀಯರಾಗಿರುತ್ತಾರೆ. ಮುಂದಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಇಂತಹ ವ್ಯಕ್ತಿಗಳು ಶತಮಾನಕ್ಕೆ ಒಮ್ಮೆ ಹುಟ್ಟುತ್ತಾರೆ ಎಂದರು. ಟಿ.ಎ.ಪೈ ದೂರದೃಷ್ಟಿಯಿಂದ ಪ್ರಾರಂಭಿಸಿದ ಟ್ಯಾಪ್ಮಿ ಇಂದು ದೇಶದ ಮುಂಚೂಣಿ ಬಿ ಸ್ಕೂಲ್‌ಗಳಲ್ಲಿ ಒಂದಾಗಿದೆ ಎಂದು ಮಾಹೆ ಕುಲಪತಿ ಲೆ. ಜ. ಡಾ. ಎಂ.ಡಿ. ವೆಂಕಟೇಶ್ ಹೇಳಿದರು. ಮಂಗಳೂರು ಕೆಎಂಸಿ ಪ್ರಾಧ್ಯಾಪಕ ಡಾ.ಲಕ್ಷ್ಮಣ ಪ್ರಭು, ಟಿ.ಎ.ಪೈಯವರ ಸಂಸ್ಮರಣೆ ಮಾಡಿದರು.
ಟಿ.ಎ.ಪೈ ದೂರದೃಷ್ಟಿಯಿಂದ ಪ್ರಾರಂಭಿಸಿದ ಟ್ಯಾಪ್ಮಿ ಇಂದು ದೇಶದ ಮುಂಚೂಣಿ ಬಿ ಸ್ಕೂಲ್‌ಗಳಲ್ಲಿ ಒಂದಾಗಿದೆ ಎಂದು ಮಾಹೆ ಕುಲಪತಿ ಲೆ. ಜ. ಡಾ. ಎಂ.ಡಿ. ವೆಂಕಟೇಶ್ ಹೇಳಿದರು. ಮಂಗಳೂರು ಕೆಎಂಸಿ ಡಾ.ಲಕ್ಷ್ಮಣ, ಟಿ.ಎ.ಪೈಯವರ ಸಂಸ್ಮರಣೆ ಮಾಡಿದರು. ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಪೈ, ಮಣಿಪಾಲ್ ಮೀಡಿಯ ನೆಟ್ವರ್ಕ್‌ನ ಕಾರ್ಯ ನಿರ್ವಾಹಕ ಅಧ್ಯಕ್ಷ ಟಿ.ಸತೀಶ್ ಯು. ಪೈ, ಬಿವಿಟಿ ನಿರ್ವಾಹಕ ವಿಶ್ವಸ್ಥ ಟಿ.ಅಶೋಕ್ ಪೈ ಉಪಸ್ಥಿತರಿದ್ದರು.
ಟ್ಯಾಪ್ಮಿ ನಿರ್ದೇಶಕ ಪ್ರೊ. ಮಧು ವೀರರಾಘವನ್ ಸ್ವಾಗತಿಸಿದರು. ಶೈಕ್ಷಣಿಕ ಡೀನ್ ಡಾ.ವಿಶ್ವನಾಥನ್ ಅಯ್ಯರ್ ಕಾರ್ಯಕ್ರಮ ನಿರ್ವಹಿಸಿದರೆ, ಸಹ ಡೀನ್ ಡಾ. ಸುಧೀಂದ್ರ ವಂದಿಸಿದರು.