ಯಕ್ಷಗಾನ ಕಲಾರಂಗದ ಯಕ್ಷನಿಧಿ ಡೈರಿ ಬಿಡುಗಡೆ

Update: 2025-01-02 15:29 GMT

ಉಡುಪಿ, ಜ.2: ಯಕ್ಷಗಾನ ಕಲಾರಂಗ ಪ್ರತೀವರ್ಷ ಯಕ್ಷನಿಧಿ ಸದಸ್ಯರಾದ ಯಕ್ಷಗಾನ ಕಲಾವಿದರ ವಿಳಾಸ ಮತ್ತು ದೂರವಾಣಿ ಸಂಖ್ಯೆ ಯನ್ನೊಳಗೊಂಡ ಡೈರಿ ಪ್ರಕಟಿಸುತ್ತಿದ್ದು, 2025ರ ಯಕ್ಷನಿಧಿ ಡೈರಿಯನ್ನು ಪರ್ಯಾಯ ಶ್ರೀಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.

ಧರ್ಮಸ್ಥಳ ಮೇಳದ ಕಲಾವಿದ ಧರ್ಮಸ್ಥಳ ಚಂದ್ರಶೇಖರ ಮತ್ತು ಕಮಲಶಿಲೆ ಮೇಳದ ಕಲಾವಿದ ನಾರಾಯಣ ಉಳ್ಳೂರ ರಿಗೆ ಸಾಂಕೇತಿಕವಾಗಿ ಪುತ್ತಿಗೆ ಶ್ರೀಗಳು ಡೈರಿಯನ್ನು ವಿತರಿಸಿದರು.

ಇದೆ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಶೈಕ್ಷಣಿಕ ನೆರವು ನೀಡುವ ವಿದ್ಯಾಪೋಷಕ್‌ಗೆ ಪರ್ಯಾಯ ಮಠದ ವತಿಯಿಂದ 10 ಲಕ್ಷ ರೂ. ಕೊಡುಗೆಯನ್ನು ನೀಡಿ ಸ್ವಾಮೀಜಿ ಹರಸಿದರು. ಪರ್ಯಾಯ ಮಠದ ಅಪೂರ್ವ ಯೋಜನೆಯಾದ ಕೋಟಿಗೀತಾ ಲೇಖನ ಯಜ್ಞದಲ್ಲಿ ವಿದ್ಯಾಪೋಷಕ್‌ನ 500ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದನ್ನು ಕಾರ್ಯದರ್ಶಿ ಮುರಲಿ ಕಡೆಕಾರ್ ಸ್ಮರಿಸಿಕೊಂಡರು.

ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಕಲಾರಂಗದ ಉಪಾಧ್ಯಕ್ಷ ಎಸ್.ವಿ.ಭಟ್, ವಿ.ಜಿ. ಶೆಟ್ಟಿ, ಸದಸ್ಯರಾದ ಯು. ವಿಶ್ವನಾಥ ಶೆಣೈ, ಭುವನಪ್ರಸಾದ ಹೆಗ್ಡೆ, ನಾರಾಯಣ ಎಂ. ಹೆಗಡೆ, ವಿಲಾಸಿನಿ ಬಿ. ಶೆಣೈ ಉಪಸ್ಥಿತರಿದ್ದರು.



 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News