ಮಾದಕ ವಸ್ತು ಮಾರಾಟ ಆರೋಪ: ಓರ್ವನ ಬಂಧನ

Update: 2025-01-04 15:13 GMT

ಉಡುಪಿ, ಜ.4: ನಿಷೇದಿತ ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನು ಉಡುಪಿ ನಗರ ಪೊಲೀಸರು ಜ.3ರಂದು ಮಧ್ಯಾಹ್ನ ವೇಳೆ ಬೀಡನಗುಡ್ಡೆ ಬಳಿ ಬಂಧಿಸಿದ್ದಾರೆ.

ನಾಗರಾಜ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, 2.50ಲಕ್ಷ ರೂ. ಮೌಲ್ಯದ 49.46 ಗ್ರಾಂ ತೂಕದ ಎಂಡಿಎಂಎ ಹಾಗೂ 3,500ರೂ. ಮೌಲ್ಯದ 3.86ಗ್ರಾಂ ತೂಕದ ಚರಸ್, ಎರಡು ಮೊಬೈಲ್, ಸ್ಕೂಟರ್‌ನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 3,25,800ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News