‘ಪಂಪ ಭಾರತ ರೀಟೋಲ್ಡ್ ಇಂಗ್ಲಿಷ್ ನೆರೇಟಿವ್’ ಪುಸ್ತಕ ಅನಾವರಣ

Update: 2025-01-06 15:31 GMT

ಉಡುಪಿ, ಜ.6: ಪಂಪ ಭಾರತ ಇಂಗ್ಲಿಷ್ ಭಾಷೆಯಲ್ಲಿ ಅನುವಾದ ಆಗಿರುವುದು ಜಾಗತಿಕ ವಿದ್ಯಾಮಾನವಾಗಿದೆ. ಇದನ್ನು ನಾವೆಲ್ಲ ಸಂಭ್ರಮಿಸ ಬೇಕಾಗಿದೆ. ಕನ್ನಡ ಮೊದಲ ಕಾವ್ಯ ಪಂಪ ಭಾರತ ಜಗತ್ತಿನ ಯಾವುದೇ ಭಾಷೆಗೂ ಅನುದಾನ ಆಗಿಲ್ಲ ಎಂದು ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಹೇಳಿದ್ದಾರೆ.

ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‌ನ ಜಂಟಿ ಆಶ್ರಯದಲ್ಲಿ ಸೋಮವಾರ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾದ ಡಾ.ಎನ್.ಟಿ. ಭಟ್ ಅವರ ‘ಪಂಪ ಭಾರತ ರೀಟೋಲ್ಡ್ ಇಂಗ್ಲಿಷ್ ನೆರೇಟಿವ್’ ಪುಸ್ತಕ ಅನಾವರಣಗೊಳಿಸಿ ಅವರು ಮಾತನಾಡುತಿದ್ದರು.

ಭಾಷೆಯ ಸೂಕ್ಷ್ಮಗಳು ಅಕ್ಷರ ಅಕ್ಷರ ಓದಿದರೆ ಮಾತ್ರ ಸಂಪೂರ್ಣ ಅರ್ಥ ಮಾಡಿಕೊಳ್ಳಲು ಸಾಧ್ಯ. ಅನುವಾದ ಎಂಬುದು ಶಬ್ಧ ಶಬ್ಧಗಳ ಭಾಷಾಂತರ ಅಲ್ಲ. ಅದು ಒಳಗಿನ ಧ್ವನಿಯಾಗಬೇಕು. ಅನುವಾದದಿಂದ ಕನ್ನಡದ ಸಂಸ್ಕೃತಿ ಯನ್ನು ಇನ್ನೊಂದು ಕಡೆ ದಾಖಲಿಸಲು ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆಯನ್ನು ಎಂಜಿಎಂ ಕಾಲೇಜಿನ ಅಧ್ಯಕ್ಷ ಪ್ರೊ.ಲಕ್ಷ್ಮೀನಾರಾಯಣ ಕಾರಂತ ವಹಿಸಿದ್ದರು. ಹಿರಿಯ ಸಾಹಿತಿ, ವಿಮರ್ಶಕ ರಮೇಶ್ ಭಟ್ ಬೆಳಗೊಡು ಕೃತಿ ಪರಿಚಯ ಮಾಡಿದರು.

ಲೇಖಕ ಡಾ.ಎನ್.ಟಿ.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಡಾ.ಅರುಣ್ ಕುಮಾರ್ ಎಸ್.ಆರ್. ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News