ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ| ಕುಂದಾಪುರ ತಾಲೂಕು ಅಧ್ಯಕ್ಷರಾಗಿ ದಸ್ತಗೀರ್, ಕಾರ್ಯದರ್ಶಿಯಾಗಿ ರಿಯಾಝ್ ಆಯ್ಕೆ
ಉಡುಪಿ: ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕುಂದಾಪುರ ತಾಲೂಕು ಅಧ್ಯಕ್ಷರಾಗಿ ಎಸ್. ದಸ್ತಗೀರ್ ಕಂಡ್ಲೂರು ಮತ್ತು ಕಾರ್ಯದರ್ಶಿಯಾಗಿ ರಿಯಾಝ್ ಕೋಡಿ ಆಯ್ಕೆಯಾಗಿದ್ದಾರೆ.
ಇಂದು ನಡೆದ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕುಂದಾಪುರ ತಾಲೂಕು ಘಟಕದ ಚುನಾವಣೆಯಲ್ಲಿ 2025-26ನೇ ಸಾಲಿನ ಕುಂದಾಪುರ ತಾಲೂಕು ಅಧ್ಯಕ್ಷರಾಗಿ ಎಸ್. ದಸ್ತಗೀರ್ ಕಂಡ್ಲೂರು ಮತ್ತು ಕಾರ್ಯದರ್ಶಿಯಾಗಿ ರಿಯಾಝ್ ಕೋಡಿ ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಎಸ್.ಎಸ್. ಹನೀಫ್ ಗುಲ್ವಾಡಿ, ಜೊತೆ ಕಾರ್ಯದರ್ಶಿಯಾಗಿ ಎಸ್. ಮುನೀರ್ ಕಂಡ್ಲೂರು, ಕೋಶಾಧಿಕಾರಿಯಾಗಿ ಫಾರೂಖ್ ಹಳವಳ್ಳಿ ಆಯ್ಕೆಯಾದರು.
ತಾಲೂಕು ಸಮಿತಿ ಸದಸ್ಯರಾಗಿ ಶಾಭಾನ್ ಹಂಗ್ಲೂರು, ಮುನಾಫ್ ಕೋಡಿ, ಅಬು ಮುಹಮ್ಮದ್ ಮುಜಾವರ್, ಅಬ್ದುಲ್ ಸತ್ತಾರ್ ಕೋಟೇಶ್ವರ, ಎಚ್. ಎ. ಹಂಝಾ ಹೆಮ್ಮಾಡಿ, ಖಲಂದರ್ ಹಂಗ್ಳೂರು, ಮುಸ್ತಾಕ್ ಹೆನ್ನಾಬೈಲ್, ಮುಹಮ್ಮದ್ ರಫೀಕ್ ವಂಡ್ಸೆ, ಮುಹಮ್ಮದ್ ಅಲಿ ಕೋಡಿ ಮತ್ತು ರವೂಫ್ ಕೋಡಿ ಆಯ್ಕೆಯಾದರು.
ಮುನಾಫ್ ಕಂಡ್ಲೂರು, ಝಹೀರ್ ನಾಖುದಾ ಗಂಗೊಳ್ಳಿ, ಜಮಾಲ್ ಗುಲ್ವಾಡಿ, ಅಬೂಬಕರ್ ಮಾವಿನಕಟ್ಟೆ ಮತ್ತು ಅಬ್ದುಲ್ ಹಮೀದ್ ಬಸ್ರೂರು ಅವರನ್ನು ತಾಲೂಕು ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.