ಬ್ರಹ್ಮಾವರ| ಲಕ್ಷಾಂತರ ರೂ. ಮೌಲ್ಯದ ಜನರೇಟರ್ ಕಳವು
Update: 2025-01-07 15:13 GMT
ಬ್ರಹ್ಮಾವರ, ಜ.7: ಸಮಾವೇಶವೊಂದಕ್ಕೆ ತಂದು ಇರಿಸಲಾದ ಲಕ್ಷಾಂತರ ರೂ. ಮೌಲ್ಯದ ಜನರೇಟರ್ ಕಳವು ಮಾಡಿರುವ ಘಟನೆ ಸಾಬರಕಟ್ಟೆ ಮಹಾತ್ಮ ಗಾಂಧಿ ಪ್ರೌಢಶಾಲೆಯ ಮೈದಾನದಲ್ಲಿ ನಡೆದಿದೆ.
ಸಾಬರಕಟ್ಟೆಯ ಹನಿ ಶಾಮಿಯಾನ ಹಾಗೂ ಲೈಟಿಂಗ್‌ನ ಅಪ್ಪು ಎಂಬವರು ಡಿ.29ರಂದು ಗಾಣಿಗರ ಸಮಾವೇಶ ಕಾರ್ಯ ಕ್ರಮಕ್ಕಾಗಿ ಕಿರ್ಲೋಸ್ಕರ್ ಕಂಪೆನಿಯ ಜನರೇಟರನ್ನು ಮೈದಾನದಲ್ಲಿ ಇರಿಸಿದ್ದರು. ಡಿ.31ರಂದು ಬೆಳಗ್ಗೆ ನೋಡುವಾಗ ಜನರೇಟರ್ ಹಾಗೂ ಅದರ ಚಾನಲ್ ಕಳವಾಗಿರುವುದು ಕಂಡು ಬಂದಿದೆ. ಇದರ ಮೌಲ್ಯ ಸುಮಾರು 3,00,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.