ಸಾಲದ ಮರುಪಾವತಿ ಹಣದಲ್ಲಿ ವಂಚನೆ: ಪ್ರಕರಣ ದಾಖಲು
Update: 2025-01-07 15:14 GMT
ಕುಂದಾಪುರ, ಜ.7: ಕೋಟೇಶ್ವರ ಗ್ರಾಮದ ಭಾರತ್ ಫೈನಾನ್ಸಿಯಲ್ ಇನ್‌ಕ್ಯೂಶನ್ ಲಿಮಿಟೆಡ್ ಶಾಖೆಯ ಅಧಿಕಾರಿಗಳು ಮರುಪಾವತಿಯಾದ ಸಾಲದ ಹಣವನ್ನು ದುರುಪಯೋಗ ಪಡಿಸಿ ವಂಚಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಸ್ಥೆಯಲ್ಲಿ ಎ.1ರಿಂದ ಜೂ.30ರ ಅವಧಿಯಲ್ಲಿ ಬ್ರಾಂಚ್ ಕ್ರೆಡಿಟ್ ಮ್ಯಾನೇಜರ್ ಮತ್ತು ಫೀಲ್ಡ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಕಾಶ್ ಎಂಬವರು 5,40,487ರೂ. ಹಾಗೂ ಗಣೇಶ ಎಂಬವರು 11,92,430ರೂ. ಹಾಗೂ ಸಾಗರ ಎಂಬವರು 3,06,498ರೂ. ಸೇರಿದಂತೆ ಒಟ್ಟು 20,39,415 ರೂ. ಹಣವನ್ನು ನೋಂದಣಿಯಾಗಿರುವ ಮಹಿಳೆಯರಿಗೆ ಸಾಲ ನೀಡಿದ್ದು, ಅವರಿಂದ ವಾರದ ಮರುಪಾವತಿ ಹಣವನ್ನು ಪಡೆದ ಇವರು, ಸಾಲದ ಖಾತೆಗೆ ಜಮಾ ಮಾಡದೇ ತಮ್ಮ ಸ್ವಂತಕ್ಕೆ ಬಳಸಿಕೊಂಡು ದುರುಪಯೋಗ ಮಾಡಿ ಕೊಂಡಿರುವುದಾಗಿ ದೂರಲಾಗಿದೆ.