ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
Update: 2025-01-04 15:17 GMT
ಕಾರ್ಕಳ, ಜ.4: ಅನಾರೋಗ್ಯದಿಂದ ಬಳಲುತ್ತಿದ್ದ ಸಾಣೂರು ಗ್ರಾಮದ ಪಾರ್ವತಿ(68) ಎಂಬವರು ಜ.3ರಂದು ರಾತ್ರಿ ತಮ್ಮನ ಮನೆಯಾದ ತೆಳ್ಳಾರಿನ ಸಾಂತ್ರಬೆಟ್ಟು ಎಂಬಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕಱಣ ದಾಖಲಾಗಿದೆ.
ಶಂಕರನಾರಾಯಣ: ಮದ್ಯ ಸೇವನೆ ಚಟದಿಂದ ಮನನೊಂದು ಜ.3ರಂದು ಸಂಜೆ ವೇಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಕುಳ್ಳುಂಜೆ ಗ್ರಾಮದ ನಿವಾಸಿ ರಾಜೇಂದ್ರ(29) ಎಂಬವರು ಜ.4ರಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.