ಕಾಪು: ಜ.5ಕ್ಕೆ ರ್ಯಾಪಿಡ್ ಚೆಸ್ ಟೂರ್ನಿ
ಕಾಪು, ಜ.2: ಶ್ರೀನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು, ಹಳೇ ಮಾರಿಯಮ್ಮ ದೇವಸ್ಥಾನ ಕಾಪು ಹಾಗೂ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಆಶ್ರಯದಲ್ಲಿ 25ನೇ ಶ್ರೀನಾರಾಯಣ ಗುರು ಟ್ರೋಫಿ ಮುಕ್ತ ಹಾಗೂ ಮಕ್ಕಳ ವಯೋಮಿತಿ ವಿಭಾಗದ ಮಿಂಚಿನ ಚೆಸ್ ಟೂರ್ನಿ ಜನವರಿ 5ರಂದು ಕಾಪುವಿನ ಹಳೇ ಮಾರಿಯಮ್ಮ ಸಭಾಭವನದಲ್ಲಿ ನಡೆಯಲಿದೆ.
ಮಕ್ಕಳ ವಿಭಾಗದಲ್ಲಿ ವಯೋಮಿತಿ 7, 9, 11, 13, 17 ವರ್ಷಗಳ ವಿಭಾಗವಿದ್ದು, ಪ್ರತಿ ವಿಭಾಗದಲ್ಲಿ ಬಾಲಕರಿಗೆ 10 ಹಾಗೂ ಬಾಲಕಿಯರಿಗೆ 7 ಬಹುಮಾನಗಳಿವೆ. ಮುಕ್ತ ವಿಭಾಗದಲ್ಲಿ 15 ನಗದು ಬಹುಮಾನವಿದ್ದು, 5 ಹಿರಿಯ ಆಟಗಾರ ರಿಗೆ, 5 ಮಹಿಳಾ ಆಟಗಾರರಿಗೆ ಹಾಗೂ ಉತ್ತಮ ಶಾಲೆಗೂ ಬಹುಮಾನವಿದೆ.
ಟೂರ್ನಿಯನ್ನು ಮಂಗಳೂರು ಮಂಗಳೂರಿನ ಹಾರ್ಟ್ ಸ್ಕ್ಯಾನ್ ಫೌಂಡೇಶನ್‌ನ ಹೃದ್ರೋಗ ತಜ್ಞ ಡಾ. ಮುಕುಂದ ಕುಂಬಳೆ ಉದ್ಘಾಟಿಸಲಿದ್ದು, ಕಾಪು ಹಳೆ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪ್ರಸಾದ್ ಶೆಣ್ಣೆ ಅಧ್ಯಕ್ಷತೆ ವಹಿಸಲಿ ದ್ದಾರೆ. ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಂಗಳೂರಿನ ಸಾಮ್ರಾಟ್ ಚೆಸ್ ಯುನಿಟ್‌ನ ಕಾರ್ಯದರ್ಶಿ ನಾಗೇಶ್ ಕಾರಂತ್, ಲಕ್ಷ್ಮೀನಾರಾಯಣ ಆಚಾರ್ಯ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದ ಅಧ್ಯಕ್ಷರಾಗಿ ಕಾಪು ಗುರಿಕಾರರಾದ ಸುಧಾಕರ ಸಾಲ್ಯಾನ್ ಭಾಗವಹಿಸಲಿದ್ದು, ಬೈಲೂರು ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕಿ ಜ್ಯೋತಿ, ಕಾಪು ಬಿಲ್ಲವರ ಸಂಘದ ಕಾರ್ಯದರ್ಶಿ ವಿಠಲ ಸಾಲ್ಯಾನ್ ಹಾಗೂ ಪಾಂಗಾಳದ ಪೆನ್ವಿಲ್ ಸೋನ್ಸ್ ಭಾಗವಹಿಸಲಿದ್ದಾರೆ.
ಟೂರ್ನಿ ಕುರಿತ ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ ಸಂಖ್ಯೆ: 9341111024ನ್ನು ಸಂಪರ್ಕಿಸುವಂತೆ ಸಂಸ್ಥೆಯ ಅಧ್ಯಕ್ಷ ಉಮಾನಾಥ ಕಾಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.