ನಮಗರಿಯದ ಹೇರಳ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಸಪೋಟಾ ಹಣ್ಣು...

Update: 2022-03-01 12:07 GMT

ಸಪೋಟ  ಹಣ್ಣು ಅಥವಾ ಚಿಕ್ಕೂ ಬೂದು-ಕಂದು ತಿರುಳಿನ ಹಣ್ಣಾಗಿದ್ದು ಸಿಹಿ ರುಚಿಯನ್ನು ಹೊಂದಿರುತ್ತದೆ.  ಹೊರ ಚರ್ಮವು ನಯವಾಗಿದ್ದು, ಅದರೊಳಗಿನ ತಿರುಳು 3-5 ಸಣ್ಣ ಕಪ್ಪು ಬೀನ್-ಆಕಾರದ ಬೀಜಗಳನ್ನು ಹೊಂದಿರುತ್ತದೆ. ಹಣ್ಣು ಮಾಗಿದ ಬಳಿಕ ತಿನ್ನಲು ಯೋಗ್ಯವಾಗಿರುತ್ತದೆ ಆದರೆ ಇನ್ನೂ ಬಲಿಯದ ಹಣ್ಣುಗಳು ಗಟ್ಟಿಯಾದ ಮೇಲ್ಮೈ ಮತ್ತು ಲ್ಯಾಟೆಕ್ಸ್ ಅಂಶದಿಂದಾಗಿ ಒಳಗಡೆ ಬಿಳಿ ತಿರುಳನ್ನು ಹೊಂದಿರುತ್ತವೆ ಮತ್ತು ಒಗರು ರುಚಿಯನ್ನು ಹೊಂದಿರುತ್ತದೆ. ಇದು ಸಾಮಾನ್ಯವಾಗಿ ಹಣ್ಣುಪ್ರಿಯರಿಗೆ ತಿಳಿದಿರುವ ವಿಚಾರವಾಗಿದೆ.

ಇನ್ನು ಸಪೋಟ ತಿನ್ನುವುದರಿಂದ ಏನೆಲ್ಲಾ‌ ಪ್ರಯೋಜನಗಳಿವೆ ನೋಡಿ:

ಜೀರ್ಣಕ್ರಿಯೆಗೆ ಉತ್ತಮ

ಚಿಕ್ಕೂ ʼಟ್ಯಾನಿನ್‌ʼನ ಸಮೃದ್ಧ ಮೂಲವಾಗಿದೆ. ಇದು ಜೀರ್ಣಾಂಗವ್ಯೂಹದ ವಿವಿಧ ಪ್ರದೇಶಗಳಲ್ಲಿ ಕಿರಿಕಿರಿಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ, ಜಠರದ ಉರಿತ ಮತ್ತು ಇತರ ಕರುಳಿನ ಕಾಯಿಲೆಗಳಿಗೆ ಶಮನ ನೀಡುತ್ತದೆ. ಸಪೋಟಾದಲ್ಲಿ ಕಂಡುಬರುವ ಹೆಚ್ಚಿನ ಪ್ರಮಾಣದ ಫೈಬರ್ ಕರುಳಿನ ಚಲನೆಯನ್ನು ಹೆಚ್ಚಿಸುತ್ತದೆ, ಜೀರ್ಣ ಕ್ರಿಯೆ ಹೆಚ್ಚಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ.


ಮೂಳೆಗಳನ್ನು ಬಲಗೊಳಿಸುತ್ತದೆ

ಸಪೋಟ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ, ಫಾಸ್ಫರಸ್, ತಾಮ್ರ ಮತ್ತು ಕಬ್ಬಿಣವನ್ನು ಹೊಂದಿರುತ್ತದೆ ಅದು ಮೂಳೆಗಳನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡುತ್ತದೆ. ಸಪೋಟದ ನಿಯಮಿತ ಸೇವನೆಯು ಮೂಳೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಚಿಕ್ಕೂನಲ್ಲಿ ತಾಮ್ರದ ಉಪಸ್ಥಿತಿಯು ಅಂಗಾಂಶ ಮತ್ತು ಸ್ನಾಯುವಿನ ಬಲವನ್ನು ಉತ್ತೇಜಿಸುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಸಪೋಟಾದಲ್ಲಿರುವ ಮೆಗ್ನೀಸಿಯಮ್ ಅಂಶವು ರಕ್ತನಾಳಗಳನ್ನು ಚಾಲನೆಯಲ್ಲಿಡುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ಅಂಶವು ಸೋಡಿಯಂ ಮಟ್ಟವನ್ನು ಕಡಿಮೆ ಮಾಡುತ್ತದೆ, ರಕ್ತದೊತ್ತಡ ಮತ್ತು ರಕ್ತಪರಿಚಲನೆಯನ್ನು ನಿಯಂತ್ರಿಸುತ್ತದೆ.

 ದೃಷ್ಟಿ ಸುಧಾರಿಸುತ್ತದೆ

ಚಿಕ್ಕೂನಲ್ಲಿನ ಹೆಚ್ಚಿನ ಪ್ರಮಾಣದ ವಿಟಮಿನ್ ಎ ಅಂಶವು ದೃಶ್ಯ ಸಂವೇದನಾ ಕೋಶಗಳ ರಚನೆಗೆ ಸಹಾಯ ಮಾಡುತ್ತದೆ ಮತ್ತು ದೃಷ್ಟಿಯನ್ನು ಹೆಚ್ಚಿಸುತ್ತದೆ.

 ಇತರ ಸಂಭವನೀಯ ಪ್ರಯೋಜನಗಳು

ಚಿಕ್ಕೂ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಮೇಲೆ ತಿಳಿಸಿದ ಆರೋಗ್ಯ ಪ್ರಯೋಜನಗಳನ್ನು ಹೊರತುಪಡಿಸಿ, ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ, ಕ್ಯಾನ್ಸರ್ ತಡೆಗಟ್ಟುತ್ತದೆ, ಶ್ವಾಸಕೋಶದ ಸಮಸ್ಯೆಗಳನ್ನು ನಿವಾರಿಸುತ್ತದೆ, ಉರಿಯೂತವನ್ನು ದೂರವಿರಿಸುತ್ತದೆ, ಶಕ್ತಿಯನ್ನು ಹೆಚ್ಚಿಸುತ್ತದೆ, ಕೆಮ್ಮು ಮತ್ತು ಶೀತವನ್ನು ಗುಣಪಡಿಸುತ್ತದೆ, ತೂಕವನ್ನು ನಿಯಂತ್ರಿಸುತ್ತದೆ. ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ, ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಪ್ರಯೋಜನಕಾರಿಯಾಗಿದೆ, ಕೂದಲಿಗೆ ಪ್ರಯೋಜನವನ್ನು ನೀಡುತ್ತದೆ, ಅತಿಸಾರವನ್ನು ನಿವಾರಿಸುತ್ತದೆ, ನರಗಳನ್ನು ಶಾಂತಗೊಳಿಸುತ್ತದೆ, ಒತ್ತಡವನ್ನು ನಿವಾರಿಸುತ್ತದೆ ಮತ್ತು ರಕ್ತಹೀನತೆಯನ್ನು ತಡೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News