ಮಾಜಿ ಸೈನಿಕರಿಗೆ ವೃದ್ಧಾಶ್ರಮ ಸ್ಥಾಪನೆ

Update: 2022-03-08 15:13 GMT

ಉಡುಪಿ, ಮಾ.8: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಸಶಸ್ತ್ರ ಪಡೆಗಳಿಂದ ನಿವೃತ್ತಿಯಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 70 ವರ್ಷ ಮೇಲ್ಪಟ್ಟ ಹಿರಿಯ ಮಾಜಿ ಸೈನಿಕರಿಗಾಗಿ ಪಾವತಿ ಆಧಾರದ ಮೇಲೆ ವೃದ್ಧಾಶ್ರಮವನ್ನು ಬೆಂಗಳೂರಿನಲ್ಲಿ ನಡೆಸಲು ಪ್ರಸ್ತಾಪಿಸಲಾಗಿದೆ.

ಆಸಕ್ತ ಹಿರಿಯ ಮಾಜಿ ಸೈನಿಕರು ಹಾಗೂ ಅವರ ಕುಟುಂಬದವರು ದಾಖಲಾತಿಗಳೊಂದಿಗೆ ಮಾರ್ಚ್ 14ರೊಳಗೆ ಮಂಗಳೂರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ, ಇದರ ಪ್ರಯೋಜನ ಪಡೆಯವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News