ಉಡುಪಿ: ಗುಡುಗು ಸಹಿತ ಹನಿ ಮಳೆ
Update: 2025-01-14 16:10 GMT
ಉಡುಪಿ, ಜ.14: ಉಡುಪಿ ಆಸುಪಾಸು ಹಾಗೂ ಜಿಲ್ಲೆಯ ಕೆಲವು ಕಡೆಗಳಲ್ಲಿ ಇಂದು ಸಂಜೆ ಗುಡುಗು, ಮಿಂಚಿನ ಸಹಿತ ಹನಿ ಮಳೆ ಸುರಿದಿದೆ. ಇದರಿಂದ ವಿವಿದೆಡೆಗಳಲ್ಲಿ ವಿದ್ಯುತ್ ಕಣ್ಣು ಮುಚ್ಚಾಲೆಯಾಡಿದೆ. ಕೆಲ ಹೊತ್ತು ಸುರಿದ ಮಳೆಯಿಂದ ವಾತಾವರಣ ಒಂದು ಹಂತದಲ್ಲಿ ತಂಪಾಗಿದೆ. ರಥಬೀದಿಯಲ್ಲಿ ಇಂದು ನಡೆದ ಮೂರು ತೇರು ಉತ್ಸವವು ಮಳೆಯ ನಡುವೆಯೇ ನಡೆಯಿತು.