ಕಾನೂನು ಮಾಪನಶಾಸ್ತ್ರ ಕಚೇರಿಯಲ್ಲಿ ಕಳವಿಗೆ ಯತ್ನ: ಪ್ರಕರಣ ದಾಖಲು

Update: 2025-01-14 15:34 GMT

ಕುಂದಾಪುರ, ಜ.14: ವಡೇರಹೋಬಳಿ ಗ್ರಾಮದ ಲೋಕೋಪಯೋಗಿ ಕಟ್ಟಡದಲ್ಲಿರುವ ಕಾನೂನು ಮಾಪನಶಾಸ್ತ್ರ ಕಛೇರಿಯ ಬಾಗಿಲಿನ ಬೀಗ ಒಡೆದು ಒಳಗೆ ಪ್ರವೇಶಿಸಿದ ಕಳ್ಳರು ಕಳವಿಗೆ ಯತ್ನಿಸಿರುವ ಬಗ್ಗೆ ವರದಿಯಾಗಿದೆ.

ಜ.6ರಿಂದ ಜ.13ರ ಮಧ್ಯಾವಧಿಯಲ್ಲಿ ನುಗ್ಗಿದ ಕಳ್ಳರು, ಕಪಾಟಿನ ಬಾಗಿಲನ್ನು ತೆರೆದು ಕಡತಗಳನ್ನು ಚೆಲ್ಲಾಪಿಲ್ಲಿ ಮಾಡಿ, ಕಿಟಕಿಗಳ ಗಾಜು ಒಡೆದು ಕಳವಿಗೆ ಪ್ರಯತ್ನಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News