ʼಸ್ವಚ್ಛ ಕಡಲತೀರ-ಹಸಿರು ಕೋಡಿ-2022ʼ ಅಭಿಯಾನದ 3ನೇ ಹಂತದ ಸ್ವಚ್ಛತಾ ಕಾರ್ಯಕ್ರಮ

Update: 2022-03-28 10:05 GMT

ಕುಂದಾಪುರ : ಸ್ವಚ್ಛ ಕಡಲತೀರ-ಹಸಿರು ಕೋಡಿ-2022ರ ಅಭಿಯಾನದ ಮೂರನೇ ಹಂತದ ಸ್ವಚ್ಛತಾ ಕಾರ್ಯಕ್ರಮ ರವಿವಾರ ಕೋಡಿ ಯಲ್ಲಿ ಜರಗಿತು.

ಕೋಡಿ ಬ್ಯಾರೀಸ್ ವಿದ್ಯಾಸಂಸ್ಥೆಗಳ ಸಂಚಾಲಕ ಸಯ್ಯದ್ ಮುಹಮ್ಮದ್ ಬ್ಯಾರಿ ಆಶಯದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಆಡಳಿತ ಮಂಡಳಿಯ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು, ಊರಿನ ಪ್ರಮುಖರು ಮತ್ತು ನಿಸರ್ಗ ಪ್ರಿಯರು ಉತ್ಸಾಹ ದಿಂದ ಪಾಲ್ಗೊಂಡು ಕೋಡಿಯ ಕಡಲತೀರವನ್ನು  ಸ್ವಚ್ಛಗೊಳಿಸಿದರು.

ಕುಂದಾಪುರ ಪುರಸಭೆ ಹಾಗೂ ಕೋಟೇಶ್ವರ ಗ್ರಾಪಂ ಸಹಕಾರದೊಂದಿಗೆ ಸಂಗ್ರಹಿಸಲಾದ ಕಸದ ವಿಲೇವಾರಿ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News