ಈ ಉರಿಬಿಸಿಲಿನಲ್ಲೂ ಹೆಚ್ಚು ಕಾಫಿ ಕುಡಿಯುತ್ತಿದ್ದೀರಾ ? ಒಮ್ಮೆ ಇದನ್ನು ಓದಿ
ಜಗತ್ತಿನಲ್ಲಿ ಚಹಾ ಕುಡಿಯಲು ಇಷ್ಟಪಡುವ ಅನೇಕ ಜನರಿದ್ದಾರೆ. ಕಾಫಿಯ ಹುಚ್ಚು ಹಿಡಿದವರು ಅನೇಕರಿದ್ದಾರೆ. ಹೌದು, ಬಹಳಷ್ಟು ಜನರು ಕಾಫಿಯನ್ನು ಇಷ್ಟಪಡುತ್ತಾರೆ . ಚಳಿಗಾಲವಾಗಲೀ, ಬೇಸಿಗೆಯಾಗಲೀ ಕಾಫಿ ಕುಡಿಯುವುದನ್ನು ಬಿಡುವುದೇ ಇಲ್ಲ. ಎಷ್ಟೋ ಜನಕ್ಕೆ ಊಟ ಆದ ನಂತರವೂ ಕಾಫಿ ಕುಡಿಯುವ ಅಭ್ಯಾಸವಿದೆ. ಕೆಲವರು ಊಟ ಬಿಡುತ್ತಾರಾದರೂ ಕಾಫಿ ಕುಡಿಯದೇ ಇರಲಾರರು.
ತಿಯಾಗಿ ಕಾಫಿ ಕುಡಿಯುವುದು ಆರೋಗ್ಯಕ್ಕೆ ಮಾತ್ರವಲ್ಲ, ಮನಸ್ಸಿಗೂ ಹಾನಿಕಾರಕವಾಗಿದೆ. ಹೌದು, ಪ್ರಪಂಚದಾದ್ಯಂತ ಅನೇಕ ಜನರು ಕಚೇರಿಯಲ್ಲಿರಲಿ, ಮನೆಯಲ್ಲಿರಲಿ ಅನೇಕ ಕಪ್ ಕಾಫಿ ಕುಡಿಯುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸಹ ಅಂತಹ ಜನರಲ್ಲಿ ಒಬ್ಬರಾಗಿದ್ದರೆ, ಸ್ವಲ್ಪ ಜಾಗರೂಕರಾಗಿರಿ, ಏಕೆಂದರೆ ದಿನದಲ್ಲಿ ಕುಡಿಯುವ ಹಲವಾರು ಕಪ್ ಕಾಫಿ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಈಗ ನಾವು ಬೇಸಿಗೆಯಲ್ಲಿ ಹೆಚ್ಚು ಕಾಫಿ ಕುಡಿಯುವುದರಿಂದ ಆಗುವ ಅನಾನುಕೂಲಗಳನ್ನು ನೊಡೋಣ ಬನ್ನಿ.
ನೀವು ದಿನಕ್ಕೆ 3 ಕಪ್‌ಗಳಿಗಿಂತ ಹೆಚ್ಚು ಕಾಫಿ ಕುಡಿಯುತ್ತಿದ್ದರೆ, ಅದು ನಿಮ್ಮ ರಕ್ತದೊತ್ತಡದ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ಸೀಮಿತ ಪ್ರಮಾಣದ ಕಾಫಿಯನ್ನು ಮಾತ್ರ ಸೇವಿಸಿ.
- ಹೆಚ್ಚು ಕಾಫಿ ಸೇವಿಸುವುದರಿಂದ ಗ್ಲುಕೋಮಾದ ಪ್ರಮಾಣವನ್ನು ಹೆಚ್ಚಿಸಬಹುದು. ಇದು ನಿಮ್ಮ ದೃಷ್ಟಿ ಹೀನತೆಗೆ ಕಾರಣವಾಗಬಹುದು.
- ಅಧಿಕ ಪ್ರಮಾಣದ ಕೆಫೀನ್ ದೇಹಕ್ಕೆ ಹೋಗುವುದು ನಿದ್ರಾಹೀನತೆಗೆ ಕಾರಣವಾಗಬಹುದು. ಈ ಕಾರಣದಿಂದಾಗಿ, ದಿನವಿಡೀ ಕೇವಲ 2 ಕಪ್ ಕಾಫಿ ಕುಡಿಯಲು ಪ್ರಯತ್ನಿಸಿ.
- ಹೆಚ್ಚು ಕಾಫಿ ಕುಡಿಯುವುದರಿಂದ ಮೈಗ್ರೇನ್ ಸಮಸ್ಯೆಯೂ ಉಂಟಾಗುತ್ತದೆ.
- ದಿನಕ್ಕೆ ಹಲವಾರು ಕಪ್ ಕಾಫಿ ಕುಡಿಯುವುದರಿಂದ ಗ್ಯಾಸ್, ಅಜೀರ್ಣ, ಮಲಬದ್ಧತೆಯಂತಹ ಸಮಸ್ಯೆಗಳು ಉಂಟಾಗಬಹುದು. ಹೆಚ್ಚು ಕಾಫಿ ದೇಹಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಉತ್ತೇಜಿಸುತ್ತದೆ.
ಯಾವುದೇ ಆಗಲೀ ಹಿತಮಿತವಾಗಿದ್ದರೆ ಚೆನ್ನ. ರುಚಿ ಇದ್ದ ಮಾತ್ರಕ್ಕೆ ಬೇಕೆಂಬಷ್ಟು ಸಲ ಸೇವಿಸಿದರೆ ಅದರಿಂದ ನಮಗೆ ಅನಾಹುತಗಳೇ ಹೆಚ್ಚು ಆಗಬಹುದು. ಬೇಸಿಗೆಯಲ್ಲಂತೂ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಿ.