ಬಾವಿಗೆ ಬಿದ್ದು ಮೃತ್ಯು
Update: 2022-05-21 16:39 GMT
ಶಿರ್ವ : ಕಾಮಗಾರಿ ನಡೆಯುತಿದ್ದ ಬಾವಿಗೆ ರಾತ್ರಿ ವೇಳೆ ಆಕಸ್ಮಿಕವಾಗಿ ಬಿದ್ದು ಕೆಲಸಗಾರರೊಬ್ಬರು ಮೃತಪಟ್ಟ ಘಟನೆ ಕಳತ್ತೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಸಂತೋಷ್ ಎಸ್.(44) ಎಂದು ಗುರುತಿಸಲಾಗಿದೆ.
ಬೆಳಪು ಗ್ರಾಮದ ಕಳತ್ತೂರಿನ ನಳಿನಿ ಎಸ್.ನಾಯ್ಕ ಎಂಬವರ ಮನೆಯ ಬಾವಿಗೆ ರಿಂಗ್ ಹಾಕುವ ಕಾಮಗಾರಿ ನಡೆದಿದ್ದು, ಸಂತೋಷ್ ಉಳಿದ ವರೊಂದಿಗೆ ಇಲ್ಲಿ ಕೆಲಸ ನಿರ್ವಹಿಸುತಿದ್ದರು. ನಿನ್ನೆ ಸಂಜೆಯವರೆಗೆ ಕೆಲಸ ಮಾಡಿ ಬಾವಿ ಪಕ್ಕದ ಶೆಡ್‌ನಲ್ಲಿ ಉಳಿದವರೊಂದಿಗೆ ಇದ್ದ ಸಂತೋಷ್, ರಾತ್ರಿ 10ಕ್ಕೆ ಪೋನ್ ಕರೆ ಬಂದ ಕಾರಣ ಹೊರಹೋಗಿದ್ದು ವಾಪಾಸು ಬಂದಿರಲಿಲ್ಲ.
ಆದರೆ ಇಂದು ಬೆಳಗ್ಗೆ ಕಾಮಗಾರಿ ನಡೆಯುತ್ತಿದ್ದ ಬಾವಿಯಲ್ಲಿ ಸಂತೋಷ್‌ರ ಮೃತದೇಹ ಕಂಡುಬಂದಿದ್ದು, ಈ ಘಟನೆಗೆ ಬಾವಿಯ ಕೆಲಸದ ಕಂಟ್ರಾಕ್ಟರ್ ಮನೋಜ್ ಹಾಗೂ ಮನೆಯ ಮಾಲಕಿ ನಳಿನಿ ನಾಯ್ಕ್ ಅವರ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಶಿರ್ವ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ತಿಳಿಸಲಾಗಿದೆ.