ಕೊಂಕಣ ರೈಲ್ವೆಯಿಂದ ಲೆವೆಲ್ ಕ್ರಾಸಿಂಗ್ ಅರಿವು ಕಾರ್ಯಾಗಾರ
Update: 2022-06-09 16:22 GMT
ಉಡುಪಿ : ಕೊಂಕಣ ರೈಲ್ವೆಯು ಇಂದು ಕೊಂಕಣ ರೈಲ್ವೆ ಮಾರ್ಗದ ವಿವಿದೆಡೆಗಳಲ್ಲಿ ಅಂತಾರಾಷ್ಟ್ರೀಯ ಲೆವೆಲ್ ಕ್ರಾಂಸಿಂಗ್ ಗೇಟ್ ಅರಿವು ಅಭಿಯಾನವನ್ನು ಸಾರ್ವಜನಿಕರಿಗಾಗಿ ಹಮ್ಮಿಕೊಂಡಿತ್ತು.
ಮಂಗಳೂರಿನಲ್ಲಿ ಕೊಂಕಣ ರೈಲ್ವೆಯ ಅಧಿಕಾರಿಗಳು ಹಳೆಯಂಗಡಿ ಇಂದಿರಾನಗರದ ಎಲ್‌ಸಿ ಗೇಟ್ ನಂ.89ರ ಬಳಿ ಹಾಗೂ ಮುಲ್ಕಿಯಲ್ಲಿ ಜನರಿಗೆ ಲೆವೆನ್ ಕ್ರಾಸಿಂಗ್ ಬಗ್ಗೆ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಸ್ಕಿಟ್‌ಗಳನ್ನು ಪ್ರದರ್ಶಿಸಿ ಅದರ ಮೂಲಕವೂ ಅರಿವು ಮೂಡಿಸಲಾಯಿತು.
ಪ್ರಯಾಣಿಕರಿಗೆ ಚಿತ್ರಗಳಿರುವ ಕರಪತ್ರಗಳನ್ನು ಹಂಚಲಾಯಿತು. ಕೊಂಕಣ ರೈಲ್ವೆಯ ಪ್ರಮುಖ ಎಲ್‌ಸಿ ಗೇಟ್‌ಗಳ ಬಳಿಕ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು.