ಮಳೆಗಾಲದಲ್ಲಿ ಆಹಾರ ಸೇವಿಸುವ ಮೊದಲು ಈ ಎಚ್ಚರಿಕೆ ಇರಲಿ
ಈಗ ಮಳೆಗಾಲ ಪ್ರಾರಂಭವಾಗಿದೆ. ಸುಡು ಬೇಸಿಗೆಯಲ್ಲಿ ಬೆಂದ ನಮಗೆ ತುಸು ಆರಾಮದಾಯಕ ವಾತಾವರಣ ಸೃಷ್ಟಿಯಾಗಿದೆ. ಆದರೆ ಹಿತವಾದ ವಾತಾವರಣದ ಹೊರತಾಗಿ, ಮಳೆಗಾಲವು ಅನೇಕ ಆರೋಗ್ಯ ತೊಂದರೆಗಳನ್ನು ತರುತ್ತದೆ. ನಾವು ಏನು ತಿನ್ನುತ್ತೇವೆ, ಹೇಗೆ ತಿನ್ನುತ್ತೇವೆ ಮತ್ತು ಯಾವಾಗ ತಿನ್ನುತ್ತೇವೆ ಎಂಬುದರ ಮೇಲೆ ಕಣ್ಣಿಡಲು ಇದು ಅತ್ಯಂತ ನಿರ್ಣಾಯಕ ಸಮಯವಾಗಿದೆ.
ಏಕೆಂದರೆ ಹವಾಮಾನ ಪರಿಸ್ಥಿತಿಗಳಲ್ಲಿನ ಬದಲಾವಣೆಗಳು ವಿಭಿನ್ನ ಬ್ಯಾಕ್ಟೀರಿಯಾಗಳು ಮತ್ತು ವಿವಿಧ ವೈರಸ್‌ಗಳೊಂದಿಗೆ ನಮ್ಮ ಆಹಾರವನ್ನು ಸುಲಭವಾಗಿ ಮುತ್ತಿಕೊಳ್ಳುತ್ತವೆ. ಇದಲ್ಲದೆ, ಇಂತಹ ಸೋಂಕಿತ ಆಹಾರವನ್ನು ನಾವು ತಿಳಿಯದೆ ಸೇವಿಸಿದಾಗ ನಮ್ಮ ಒಟ್ಟಾರೆ ಕರುಳಿನ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯ ಮೇಲೆ ಸುಲಭವಾಗಿ ಪರಿಣಾಮ ಬೀರುತ್ತದೆ.
ಜ್ವರ,ಶೀತದ ಹೊರತಾಗಿ, ಮಳೆಗಾಲದಲ್ಲಿ ನೀರಿನಿಂದ ಹರಡುವ ರೋಗಗಳು ಸಾಮಾನ್ಯವಾಗಿ ಬರುತ್ತವೆ, ಆದ್ದರಿಂದ ಹೆಚ್ಚಿನ ಜಾಗರೂಕರಾಗಿರುವುದು ಅಗತ್ಯವಾಗಿದೆ. ಆದ್ದರಿಂದ, ಈ ಮಾನ್ಸೂನ್ ಸಮಯದಲ್ಲಿ ಆಹಾರವನ್ನು ಹೇಗೆ ತಿನ್ನಬೇಕು ಎಂಬ ವಿಧಾನಗಳನ್ನು ತಿಳಿಯೋಣ.
ಸಮುದ್ರಾಹಾರವನ್ನು ಮಿತಿಗೊಳಿಸಿ
ನೀವು ಪೆಸ್ಕೇಟೇರಿಯನ್ ಆಗಿದ್ದರೆ ಅಥವಾ ಸಮುದ್ರಾಹಾರವನ್ನು ಇಷ್ಟಪಡುವವರಾಗಿದ್ದರೆ, ಮಳೆಗಾಲದಲ್ಲಿ ಈ ಆಹಾರ ಸೇವಿಸುವುದು ಅಪಾಯಕಾರಿಯಾಗಬಹುದು. ಏಕೆಂದರೆ ಈ ಮಾನ್ಸೂನ್‌ನಲ್ಲಿ ನೀವು ಸಮುದ್ರಾಹಾರವನ್ನು ಸೇವಿಸುವುದನ್ನು ಬಿಟ್ಟು ಬಿಡುವುದು ಒಳಿತಾಗಿದೆ. ಏಕೆಂದರೆ ಮಳೆಗಾಲದಲ್ಲಿ ನೀರಿನ ಮಾಲಿನ್ಯದ ಅಪಾಯವು ಹೆಚ್ಚಾಗಿರುತ್ತದೆ, ಇದು ಸುಲಭವಾಗಿ ಮೀನು ಮತ್ತು ಇತರ ಜಲಚರಗಳಿಗೆ ಸೋಂಕು ತಗುಲುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಮಳೆಯ ಸಮಯದಲ್ಲಿ ಸಮುದ್ರಾಹಾರವನ್ನು ತಿನ್ನದೇ ಇರುವುದು ಅಥವಾ ಮಿತಿಗೊಳಿಸುವುದು ಉತ್ತಮ.
ಬೇಯಿಸದ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ
ಕಚ್ಚಾ ಆಹಾರವು ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಾಸಸ್ಥಳ ಆಗಿರಬಹುದು ಮತ್ತು ಆದ್ದರಿಂದ ಬೇಯಿಸದ ಅಥವಾ ಅರ್ಧ-ಬೇಯಿಸಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಆಹಾರವನ್ನು ಸರಿಯಾಗಿ ಬೇಯಿಸಿ ತಿನ್ನಬೇಕು. ಏಕೆಂದರೆ ಮಳೆಗಾಲದಲ್ಲಿ ಆ ಆಹಾರದಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಬದುಕುಳಿಯುವ ಹೆಚ್ಚಿನ ಸಾಧ್ಯತೆಗಳಿವೆ.
ಬೀದಿ ಆಹಾರವನ್ನು ತಿನ್ನುವುದು ಬಿಡಬೇಕು
ಮಾನ್ಸೂನ್ ಋತುವಿನಲ್ಲಿ, ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಬೆಳವಣಿಗೆಗೆ ತಾಪಮಾನವು ಸೂಕ್ತವಾಗಿದೆ ಮತ್ತು ಆಹಾರ ಮತ್ತು ನೀರಿನಿಂದ ಹರಡುವ ರೋಗಗಳ ಸಾಧ್ಯತೆಗಳು ತುಂಬಾ ಹೆಚ್ಚು. ಆದ್ದರಿಂದ ನೀವು ವರ್ಷದ ಈ ಸಮಯದಲ್ಲಿ ಬೀದಿ ಆಹಾರದಿಂದ ಅಂದರೆ ಮುಚ್ಚದೇ ಇರುವ ಆಹಾರದಿಂದ ದೂರವಿರಬೇಕು.
ಆಹಾರ ಪದಾರ್ಥಗಳನ್ನು ಸೇವಿಸುವ ಮೊದಲು ತೊಳೆಯಿರಿ
ನೀವು ವರ್ಷದ ಎಲ್ಲಾ ಸಮಯದಲ್ಲೂ ನಿಮ್ಮ ಆಹಾರ ಪದಾರ್ಥವನ್ನು ತೊಳೆಯಬೇಕು, ಮಳೆಗಾಲದಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಹೆಚ್ಚಾಗಿ ತರಕಾರಿಗಳು ಮತ್ತು ಹಣ್ಣುಗಳಲ್ಲಿ, ವಿಶೇಷವಾಗಿ ಹಸಿರು ಎಲೆಗಳ ತರಕಾರಿಗಳಲ್ಲಿ ವಾಸಿಸುತ್ತವೆ. ನಿಮ್ಮ ಆಹಾರವನ್ನು ಸೇವಿಸುವ ಮೊದಲು ಸರಿಯಾಗಿ ತೊಳೆಯುವುದು ಬಹಳ ಮುಖ್ಯ. ಹಣ್ಣುಗಳು ಮತ್ತು ತರಕಾರಿಗಳನ್ನು ಖರೀದಿಸುವಾಗ ಜಾಗರೂಕರಾಗಿರಿ. ಮಾಂಸವನ್ನು ಬೇಯಿಸುವ ಮೊದಲು ನೀವು ಅದನ್ನು ಬೆಚ್ಚಗಿನ ನೀರಿನಿಂದ ಎಚ್ಚರಿಕೆಯಿಂದ ತೊಳೆಯಬೇಕು.