ಜೂ.26: ಸಾಂಸ್ಕೃತಿಕ ವಸಾಹತುಶಾಹಿ- ದಲಿತ ಚಳವಳಿಯ ಪ್ರತಿರೋಧ ವಿಚಾರ ಸಂಕಿರಣ

Update: 2022-06-22 14:28 GMT

ಉಡುಪಿ: ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲೆ ಇದರ ಆಶ್ರಯದಲ್ಲಿ ಸಾಂಸ್ಕೃತಿಕ ವಸಾಹತುಶಾಹಿ ಮತ್ತು ದಲಿತ ಚಳವಳಿಯ ಪ್ರತಿರೋಧ ಎಂಬ ವಿಚಾರ ಸಂಕಿರಣವನ್ನು ಜೂ.೨೬ರಂದು ಬೆಳಗ್ಗೆ ೧೦ಗಂಟೆಗೆ ಆದಿ ಉಡುಪಿಯ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತ ಬೆಂಗಳೂರಿನ ಡಾ.ವಡ್ಡಗೆರೆ ನಾಗರಾಜಯ್ಯ ಉದ್ಘಾಟಿಸಿ ವಿಚಾರ ಮಂಡಿಸಲಿರುವರು. ಯುವಸೇನೆ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಲಿರುವರು. ಮುಖ್ಯಅತಿಥಿಗಳಾಗಿ ನೇತ್ರತಜ್ಞ ಡಾ. ಪ್ರೇಮದಾಸ, ಪ್ರಗತಿಪರ ಚಿಂತಕ ಶ್ರೀರಾಮ ದಿವಾಣ, ದಲಿತ ಮುಖಂಡ ವಕೀಲ ಮಂಜುನಾಥ ಗಿಳಿಯಾರು ಭಾಗವಹಿಸಲಿರುವರು ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News