ನಿವೃತ್ತ ವಾಯುಸೇನಾಧಿಕಾರಿ ಗ್ರೂಪ್ ಕ್ಯಾಪ್ಟನ್ ಶಶಿಧರ ಐತಾಳ್ ನಿಧನ

Update: 2022-07-05 15:47 GMT

ಉಡುಪಿ, ಜು.೫: ಭಾರತೀಯ ವಾಯುಸೇನೆಯಲ್ಲಿ ಮೂರು ದಶಕಗಳಿಗೂ ಅಧಿಕ ಕಾಲ ವೈದ್ಯಕೀಯ ವಿಭಾಗದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಸೇನಾಧಿಕಾರಿ ಗ್ರೂಪ್‌ಕ್ಯಾಪ್ಟನ್ ಶಶಿಧರ ಎಚ್. ಐತಾಳ್ (೬೮) ಇಂದು ಅಂಬಲಪಾಡಿಯ ಸ್ವಗೃಹದಲ್ಲಿ ನಿಧನ ಹೊಂದಿದರು.

ಇವರು ಉಡುಪಿಯ ಕಾನೂನು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ದಿ.ಎಚ್.ಪಿ ಐತಾಳ್‌ರ ಹಿರಿಯ ಪುತ್ರ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಬಂಧುಗಳನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News