ವಿದ್ಯಾರ್ಥಿನಿ ನೀರುಪಾಲು: ಸರಕಾರ ನಿರ್ಲಕ್ಷ್ಯವೇ ಕಾರಣ: ಜೆಡಿಎಸ್
Update: 2022-08-10 14:35 GMT
ಉಡುಪಿ, ಆ.10: ಬೈಂದೂರು ಕಾಲ್ತೋಡು ಗ್ರಾಮದ ವಿದ್ಯಾರ್ಥಿನಿ ಸನ್ನಿಧಿ ನೀರು ಪಾಲಾಗಲು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಕರಾವಳಿ ಮತ್ತು ಮಲೆನಾಡು ಗ್ರಾಮಗಳ ಗ್ರಾಮೀಣ ಮಕ್ಕಳಿಗೆ ಮಳೆಗಾಲದಲ್ಲಿ ಶಾಲೆಗೆ ತೆರಳಲು ಅನುಕೂಲವಾಗಲು ಜಾರಿಗೊಳಿಸಿದ ಶಾಲಾ ಸಂಪರ್ಕ ಸೇತು ಯೋಜನೆಗೆ ಬಿಜೆಪಿ ಸರಕಾರ ತಿಲಾಂಜಲಿ ಇಟ್ಟಿರುವುದೇ ಮುಖ್ಯ ಕಾರಣ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಆರೋಪಿಸಿದ್ದಾರೆ.
ಒಂದು ವೇಳೆ ಕುಮಾರಸ್ವಾಮಿಯವರ ಈ ಯೋಜನೆ ಪೂರ್ಣಗೊಂಡಿದ್ದರೆ ಈ ಘಟನೆ ಖಂಡಿತವಾಗಿಯೂ ನಡೆಯುತ್ತಿರಲಿಲ್ಲ. ಇಂತಹ ಘಟನೆಗಳಿಗೆ ಕಾರಣ ಏನೆಂದು ಜನರು ತಿಳಿದುಕೊಳ್ಳಬೇಕು. ಇನ್ನಾದರೂ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿ ಎಂದು ಅವರು ಸರಕಾರವನ್ನು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.