ಸುರತ್ಕಲ್: ರೈಲ್ವೆ ನಿಲ್ದಾಣದ ಪ್ರಯಾಣಿಕರ ತಂಗುದಾಣ ಉದ್ಘಾಟನೆ
Update: 2023-01-21 14:02 GMT
ಉಡುಪಿ: ಕೊಂಕಣ ರೈಲ್ವೆಯ ಸುರತ್ಕಲ್ ರೈಲು ನಿಲ್ದಾಣದ ಪ್ಲಾಟ್‌ಫಾರಂ ನಂ.1ರಲ್ಲಿ ರೋಟರಿ ಕ್ಲಬ್ ಸುರತ್ಕಲ್‌ನ ನೆರವಿನಿಂದ ನೂತನವಾಗಿ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣವನ್ನು ಶನಿವಾರ ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಕೊಂಕಣ ರೈಲ್ವೆಯ ಸಹಾಯಕ ಟ್ರಾಫಿಕ್ ಮ್ಯಾನೇಜರ್ ಗೋವರ್ಧನ್‌ಲಾಲ್ ಮೀನಾ, ರೋಟರಿ ಕ್ಲಬ್‌ನ ಸಹಾಯಕ ಗವರ್ನರ್ ಬಾಲಕೃಷ್ಣ ಶೆಟ್ಟಿ, ರೋಟರಿ ಕ್ಲಬ್‌ನ ಯಶೋಮತಿ ರವೀಂದ್ರನಾಥ, ಯೋಗೀಶ್ ಕುಳಾಯಿ, ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
ಪ್ಲಾಟ್‌ಫಾರಂ ನಂ.1ರಲ್ಲಿ ಪ್ರಯಾಣಿಕರ ತಂಗುದಾಣದ ನಿರ್ಮಾಣದೊಂದಿಗೆ ಸುರತ್ಕಲ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಮೂಲಭೂತ ಸೌಕರ್ಯಗಳಲ್ಲಿ ಮತ್ತೊಂದನ್ನು ಒದಗಿಸಿದಂತಾಗಿದೆ.