ಪ್ರಭಾಕರ ಶೆಟ್ಟಿ
Update: 2023-01-28 13:26 GMT
ಸುರತ್ಕಲ್: ಸುರತ್ಕಲ್ ಮುದ್ದರಮನೆ ನಿವಾಸಿ, ಬಾಳಿಕೆ ಶ್ರೀ ಕೋರ್ದಬ್ಬು ದೈವಸ್ಥಾನದ ಗೌರವಾಧ್ಯಕ್ಷ ಪ್ರಭಾಕರ ಶೆಟ್ಟಿ (67) ಅವರು ಜ.27 ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. .
ಪ್ರಭಾಕರ ಶೆಟ್ಟಿ ಅವರು ಖ್ಯಾತ ಕಬಡ್ಡಿ ಆಟಗಾರರಾಗಿದ್ದರು. ಬಾಳಿಕೆ ಶ್ರೀ ಕೋರ್ದಬ್ಬು ದೈವಸ್ಥಾನದ ಅಧ್ಯಕ್ಷರಾಗಿ, ಪ್ರಸ್ತುತ ಗೌರವಾಧ್ಯಕ್ಷರಾಗಿ ಧಾರ್ಮಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.
ಸುರತ್ಕಲ್ ನಲ್ಲಿ ಅರುಣ್ ಟ್ರಾವೆಲ್ಸ್ ಸಂಸ್ಥೆಯ ಮಾಲಕರಾಗಿದ್ದ ಅವರು, ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.