ಸವಿತಾ ಹರಿದಾಸ್ ನಾಯಕ್
Update: 2023-02-03 13:50 GMT
ಮಂಗಳೂರು: ಮೂಲತಃ ಮಂಗಳೂರಿನ ನಿವಾಸಿಯಾದ ಸವಿತಾ ಹರಿದಾಸ್ ನಾಯಕ್ (ಜಯಶ್ರೀ ಮಲ್ಯ) ಫೆ.೦೨ರಂದು ಹೃದಯಾಘಾತದಿಂದ ವಾಶೀ ನವೀ ಮುಂಬಯಿ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ, ಇಬ್ಬರು ಸಹೋದರರರು ಹಾಗೂ ಒಬ್ಬ ಸಹೋದರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಲೇಡಿಹಿಲ್ ವಿಕ್ಟೋರಿಯ ಶಾಲೆ ಹಾಗೂ ಸಂತಅಗ್ನೇಸ್ ಕಾಲೇಜಿನ ಹಳೇ ವಿದ್ಯಾರ್ಥಿಯಾದ ಇವರು ಲಯನ್ಸ್ ನವೀ ಮುಂಬಯಿ, ಕನ್ನಡ ಸಂಘ, ಜಿ.ಎಸ್.ಬಿ ಸಂಘ, ಮಹಿಳಾ ಸಂಘದಲ್ಲಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿ ಸಮಾಜ ಸೇವೆ ಸಲ್ಲಿಸಿದ್ದರು.