ಅಶೋಕ ಕರ್ಕೇರ
ಕೊಣಾಜೆ: ಇರಾ ಗ್ರಾಮದ ದರ್ಖಾಸು ನಿವಾಸಿ ದಿ. ಬಿ. ಎಂ ರಾಮ ಕರ್ಕೇರರವರ ಪುತ್ರ ಅಶೋಕ ಕರ್ಕೇರ (50 ) ಶನಿವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಸ್ಥಳೀಯವಾಗಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಅವರು, ಹಿರಿಯ ಸಹೋದರ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ ಸಹಿತ ತಾಯಿ, ಪತ್ನಿ, ಪುತ್ರಿ,ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರರನ್ನು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ರಾಜ್ಯ ವಿಪಕ್ಷ ಉಪನಾಯಕರಾದ ಯು ಟಿ ಖಾದರ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್, ನಾಯಕರಾದ ನಾಸೀರ್ ನಡುಪದವು, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆಗ್ನೇಸ್ ಡಿ ಸೋಜಾ, ಮಾಜಿ ಅಧ್ಯಕ್ಷರಾದ ಅಬ್ದುಲ್ ರಝಕ್ ಕುಕ್ಕಾಜೆ, ಅಬ್ದುಲ್ ರಹಿಮಾನ್ ಸಂಪಿಲ, ಉಪಾಧ್ಯಕ್ಷರಾದ ಮೊಯ್ದುಕುಂಜಿ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅಶ್ರಫ್ ಸಂಪಿಲ, ಮುಡಿಪು ಬ್ಲಾಕ್ ಹಿಂದುಳಿದ ವರ್ಗ ಘಟಕದ ಅಧ್ಯಕ್ಷರಾದ ಅನಿಲ್ ಕುಮಾರ್ ಇರಾ, ಇರಾ ಗ್ರಾಮ ಪಂಚಾಯತ್ ಸದಸ್ಯರು ಸಂತಾಪ ಸೂಚಿಸಿದ್ದಾರೆ.