ಮಾಣಿಪಾಡಿ ಸತೀಶ್ ಪಾಟ್ಕರ್
Update: 2023-02-17 14:15 GMT
ಶಿರ್ವ: ಬಂಟಕಲ್ಲು ಮಾಣಿಪಾಡಿ ನಿವಾಸಿ, ಬಂಟಕಲ್ಲು ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಸತೀಶ್ ಪಾಟ್ಕರ್(೫೦) ಮಂಗಳವಾರ ಅನಾರೋಗ್ಯದಿಂದ ನಿಧನ ಹೊಂದಿದರು.
೫ ವರ್ಷ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಇವರು ನಂತರ ಊರಿನಲ್ಲೆ ಸ್ವಉದ್ಯೋಗ ಪ್ರಾರಂಭಿಸಿ, ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು. ಮೃತರು ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಸಹೋದರಿಯರನ್ನು ಅಗಲಿದ್ದಾರೆ. ಅವರ ಅಕಾಲಿಕ ನಿಧನಕ್ಕೆ ಬಂಟಕಲ್ಲು ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.