ರಾಧು ಪೂಜಾರ್ತಿ ಅಂಬಲಪಾಡಿ
Update: 2023-02-27 14:13 GMT
ಉಡುಪಿ : ಅಂಬಲಪಾಡಿ ಶ್ರೀವಿಠೋಬ ಭಜನಾ ಮಂದಿರದ ಬಳಿಯ ನಿವಾಸಿ ದಿ.ತೋಮ ಪೂಜಾರಿ ಅವರ ಧರ್ಮಪತ್ನಿ ರಾಧು ಪೂಜಾರ್ತಿ (95) ಇವರು ಸೋಮವಾರ ಸ್ವಗೃಹದಲ್ಲಿ ನಿಧನರಾದರು.
ಸುದೀರ್ಘ ಕಾಲ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಇವರು ಭಜನಾ ಮಂದಿರದ ವಾರದ ಭಜನಾ ಪೂಜೆಯಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಇವರು ಪುತ್ರ, ಇಬ್ಬರು ಪುತ್ರಿಯರು ಹಾಗೂ ಬಂಧು ವರ್ಗವನ್ನು ಅಗಲಿದ್ದಾರೆ.