ಎಸ್. ಗಂಗಾಧರ ಭಟ್

Update: 2023-02-27 16:32 GMT

ಬಂಟ್ವಾಳ, ಫೆ.27: ಸಜಿಪಮೂಡ ಗ್ರಾಮದ ಕೊಳಕೆ ನಿವಾಸಿ ಎಸ್. ಗಂಗಾಧರ ಭಟ್ ಕೊಳಕೆ (77) ಅವರು ಅಸೌಖ್ಯದಿಂದ ಸ್ವಗೃಹದಲ್ಲಿ ಸೋಮವಾರ ನಿಧನ ಹೊಂದಿದರು.

ಕೃಷಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಅವರು ನಂದಾವರ ಶ್ರೀ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನದ ಮಾಜಿ ಟ್ರಸ್ಟಿಯಾಗಿ, ಬಂಟ್ವಾಳ ತಾಲೂಕು ಕಸಾಪ ಕನ್ನಡ ಭವನ ನಿರ್ಮಾಣ ಕಟ್ಟಡ ಸಮಿತಿ ಅಧ್ಯಕ್ಷರಾಗಿ, ನೀರ್ಪಾಜೆ ಭೀಮ‌ಭಟ್ ಅಭಿಮಾನಿ ಬಳಗದ‌ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ತನ್ನ ದೇಹವನ್ನು ದೇರಳಕಟ್ಟೆ ಆಸ್ಪತ್ರೆಗೆ ದಾನ ಮಾಡಿದ್ದ ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Similar News

ಹರಿಶ್ಚಂದ್ರ
ವಿಮಲ ಭಟ್
ಕಮಲಾಕ್ಷ