ಬೀಫಾತಿಮ
Update: 2023-03-05 18:33 GMT
ಬಂಟ್ವಾಳ: ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗ ನಿವಾಸಿ ದಿ. ಪೋಸ್ಟ್ ಮಾಸ್ಟರ್ ರಹಿಮಾನ್ ಅವರ ಪತ್ನಿ ಬೀಫಾತಿಮ(80) ಅಲ್ಪ ಕಾಲದ ಅಸೌಖ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಮಹಮ್ಮದ್ ರಫೀಕ್ ಮತ್ತು ಬಂಟ್ವಾಳ ನ್ಯಾಯಾಂಗ ಇಲಾಖೆಯಲ್ಲಿನ ಸಿಬ್ಬಂದಿ ಶಾಹುಲ್ ಹಮೀದ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯ ರವಿವಾರ ಸಂಜೆ ವಗ್ಗ ಮುಹಿಯುದ್ದೀನ್ ಜುಮಾ ಮಸೀದಿ ದಫನ ಭೂಮಿಯಲ್ಲಿ ನಡೆಸಲಾಯಿತು.