ಗಂಗಾಧರ ಶೆಟ್ಟಿ ಉಳ್ಳಾಲ್

Update: 2023-03-15 17:13 GMT

ಮಂಗಳೂರು :  ತೊಕ್ಕೊಟ್ಟು ಓವರ್‌ಬ್ರಿಡ್ಸ್ ನಿವಾಸಿ ಸಿಪಿಐ(ಎಂ) ಮುಂದಾಳು, ಸಾಮಾಜಿಕ ಕಾರ್ಯಕರ್ತ ಗಂಗಾಧರ ಶೆಟ್ಟಿ ಉಳ್ಳಾಲ (77) ಅಲ್ಪಕಾಲದ ಅಸೌಖ್ಯದಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಸಿಪಿಐ(ಎಂ) ಪಕ್ಷದಲ್ಲಿ ಸಕ್ರಿಯವಾಗಿದ್ದು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಅವರು ಜನಪರ ಹೋರಾಟ ಗಳಲ್ಲಿ ಮುಂಚೂಣಿಯಲ್ಲಿದ್ದರು. ಸಾಕ್ಷರತಾ ಅಂದೋಲನದ ಸಂಯೋಜಕರಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದರು.  ಜತೆಗೆ ಹವ್ಯಾಸಿ ರಂಗನಟನೂ ಆಗಿದ್ದರು.

ಬಿಜೆಪಿ ನಾಯಕ ರವೀಂದ್ರ ಶೆಟ್ಟಿ ಉಳಿದೊಟ್ಟುಬೆಟ್ಟು, ಚಂದ್ರಶೇಖರ ಉಚ್ಚಿಲ್, ಸಿಪಿಐ(ಎಂ)ನ ಯಾದವ ಶೆಟ್ಟಿ, ಮುನೀರ್ ಕಾಟಿಪಳ್ಳ, ಜನಶಿಕ್ಷಣ ಟ್ರಸ್ಟ್ ಕೃಷ್ಣ ಶೆಟ್ಟಿ, ಕೃಷ್ಣಮೂಲ್ಯ ಮೃತದೇಹದ ಅಂತಿಮ ದರ್ಶನ ಪಡೆದರು.

ಅವರು ಪತ್ನಿ, ಪುತ್ರಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ವರ್ಗವನ್ನು ಆಗಲಿದ್ದಾರೆ.

Similar News

ಹರಿಶ್ಚಂದ್ರ
ವಿಮಲ ಭಟ್
ಕಮಲಾಕ್ಷ