ಲೋಕಯ್ಯ ಶೆಟ್ಟಿ
Update: 2023-03-21 17:59 GMT
ಮಂಗಳೂರು: ನಗರದ ಅತ್ತಾವರ ಶಾಂತಾಳ್ವ ಕಾಂಪೌಂಡ್ ಬಳಿ ವಾಸವಾಗಿದ್ದ ಸಿಪಿಎಂ ಪಕ್ಷದ ಹಿರಿಯ ಮುಖಂಡ ಲೋಕಯ್ಯ ಶೆಟ್ಟಿ (84) ಅವರು ಮಂಗಳವಾರ ನಿಧನರಾದರು.
ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ಎಸ್.ಕೆ. ಟೈಲ್ ವರ್ಕಸ್ ಯೂನಿಯನ್ ಪದಾಧಿಕಾರಿಯಾಗಿ, ಮಂಗಳೂರು ಬೀಡಿ ಯೂನಿಯನ್ ಅಧ್ಯಕ್ಷರಾಗಿ, ಸಿಪಿಎಂ ಪಕ್ಷದ ನಗರ ಸಮಿತಿ ಸದಸ್ಯರಾಗಿ ಮೃತರು ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ.
ಸಿಪಿಎಂ ಪಕ್ಷದ ಜಿಲ್ಲಾ ಮುಖಂಡರಾದ ಕೆ.ಯಾದವ ಶೆಟ್ಟಿ, ಜೆ.ಬಾಲಕೃಷ್ಣ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಸುಕುಮಾರ್, ಸಂತೋಷ್ ಬಜಾಲ್ ಮೃತರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿ ಸಂತಾಪ ಸೂಚಿಸಿದರು.