ಹಾಜಿ ಅಬ್ದುಲ್ ಮಜೀದ್ ನಿಧನ
Update: 2025-01-04 16:03 GMT
ಬೆಂಗಳೂರು: ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅಬ್ದುಲ್ ಅಝೀಮ್ ರವರ ಚಿಕ್ಕಪ್ಪ ಹಾಗೂ ಪ್ರಗತಿಪರ ರೈತರಾಗಿದ್ದ ಹಾಜಿ ಅಬ್ದುಲ್ ಮಜೀದ್(84) ವಯೋಸಹಜ ಅನಾರೋಗ್ಯದಿಂದಾಗಿ ಇಲ್ಲಿನ ಇಲ್ಯಾಸ್ ನಗರದಲ್ಲಿ ಗುರುವಾರ ತಡರಾತ್ರಿ ನಿಧನರಾದರು.
ಶುಕ್ರವಾರ ಮಧ್ಯಾಹ್ನ ನಮಾಝ್ ಬಳಿಕ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅವರ ಸ್ವಗ್ರಾಮ ಧನಗುರು ಗ್ರಾಮದಲ್ಲಿರುವ ಜಾಮಿಯಾ ಮಸೀದಿಯಲ್ಲಿ ನಮಾಝೆ ಜನಾಝ ನಿರ್ವಹಿಸಿ, ಅಲ್ಲಿನ ಖಬರಸ್ಥಾನ್‍ನಲ್ಲಿ ದಫನ್ ಕಾರ್ಯ ನೆರವೇರಿಸಲಾಯಿತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಮೃತರು, ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.