ಚಿಟ್ಟಾಣಿ ರಾಮ ಹೆಗಡೆ

Update: 2025-01-01 13:35 GMT

ಉಡುಪಿ, ಜ.1: ಬಡಗುತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ ಚಿಟ್ಟಾಣಿ ರಾಮ ಹೆಗಡೆ (82) ಮಂಗಳವಾರ ನಿಧನರಾದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ದೀರ್ಘಕಾಲ ಗುಂಡುಬಾಳ ಮೇಳ ಮತ್ತು ಸಾಲಿಗ್ರಾಮ ಮೇಳಗಳಲ್ಲೂ ಕಲಾಸೇವೆಗೈದಿದ್ದರು. ಪೌರಾಣಿಕ ಸ್ತ್ರೀ ಹಾಗೂ ಪುರುಷ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದ ಅವರು ಒಟ್ಟು ಐದು ದಶಕಗಳ ಕಲಾಸೇವೆ ಮಾಡಿದ್ದರು. ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆ ಅವರಿಗೆ ಹತ್ತು ವರ್ಷಗಳ ಹಿಂದೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ನೀಡಿ ಗೌರವಿಸಿತ್ತು.

ರಾಮ ಹೆಗಡೆ ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಮೀದ್ ಹಾಜಿ
ಭೋಜ ಪೂಜಾರಿ
ಡಾ. ಆಶಾ ಭಟ್