ಡಾ. ಆಶಾ ಭಟ್
Update: 2024-12-25 16:18 GMT
ಮಣಿಪಾಲ, ಡಿ. 25: ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಕನ್ಸಲ್ಟೆೆಂಟ್ ಕಾರ್ಡಿಯೋಲಾಜಿಸ್ಟ್ ಡಾ.ಕೆ.ಎಸ್.ಎಸ್.ಭಟ್ ಅವರ ಪತ್ನಿ, ಹಿರಿಯ ವೈದ್ಯೆ ಡಾ.ಆಶಾ ಭಟ್ (79) ಅಸೌಖ್ಯದಿಂದ ಡಿ.24ರಂದು ಬೆಂಗಳೂರಿನ ಇಂದಿರಾನಗರದ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಮೂಲತ: ಮಡಿಕೇರಿಯವರಾದ ಡಾ.ಆಶಾ ಭಟ್, ನ್ಯೂಜಿಲಂಡ್, ಲಿಬಿಯಾ ಮೊದಲಾದ ದೇಶಗಳಲ್ಲಿ, ದಿಲ್ಲಿಯ ಪ್ರತಿಷ್ಠಿತ ಸಫ್ಜರ್‌ಜಂಗ್ ಆಸ್ಪತ್ರೆ ಮತ್ತು ಬೆಂಗಳೂರಿನಲ್ಲಿ ಜನರಲ್ ಪ್ರಾಾಕ್ಟೀಶನರ್ ಆಗಿ ವೈದ್ಯಕೀಯ ಸೇವೆ ಸಲ್ಲಿಸಿದ್ದರು.
ಚಿತ್ರಕಲಾವಿದರಾದ ಆಶಾ ಭಟ್, ತಂಜಾವೂರು, ಮೈಸೂರು ಶೈಲಿಯ ಚಿತ್ರಕಲೆಗಳನ್ನು ರಚಿಸಿದ್ದರು. ಕರ್ನಾಟಕ ಸಂಗೀತದ ಹಾಡುಗಾರರಾಗಿ ಮತ್ತು ಹಾರ್ಮೋನಿಯಂ ವಾದಕರಾಗಿಯೂ ಅವರು ಖ್ಯಾತರಾಗಿದ್ದರು. ಬೆಂಗಳೂರಿ ನಲ್ಲಿ ಲೇಡೀಸ್ ವಾಕಿಂಗ್ ಗ್ರೂಪ್‌ನ ಪ್ರವರ್ತಕರಾಗಿ ಸಕ್ರಿಯರಾಗಿದ್ದರು.