ಎ.ಕೆ. ಮುಹಿಯುದ್ದೀನ್
Update: 2024-12-13 17:48 GMT
ಮಂಗಳೂರು: ನಗರದ ಜೆಪ್ಪು ಮಂಗಳಾದೇವಿ ನಿವಾಸಿ, ಹಿರಿಯ ಸಮಾಜ ಸೇವಕ ಎ.ಕೆ. ಮುಹಿಯುದ್ದೀನ್ (73) ಗುರುವಾರ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪತ್ನಿ ಮತ್ತು ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಮತ್ತು ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ಗಲ್ಫ್ ರಾಷ್ಟ್ರದ ಮೆಫಾ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಅವರು ಮಸ್ಕತ್‌ನ "ಸೇವಾ" ಸಂಘಟನೆಯ ಅಧ್ಯಕ್ಷರಾಗಿದ್ದರು. ಈ ಸಂಘಟನೆಯಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆಯನ್ನು ಶುಕ್ರವಾರ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.