ನೀಲಕಂಠ ಭಾಗವತ್
Update: 2024-12-07 12:04 GMT
ಉಡುಪಿ, ಡಿ.7: ಮೂಡನಿಡಂಬೂರು ನಿವಾಸಿ ಕುಂಟಾಡಿ ನೀಲಕಂಠ ಭಗವತ್ (81) ಇಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಉಡುಪಿ ಡಾ.ಟಿ.ಎಂ.ಎ. ಪೈ ಕಾಲೇಜ್ ಆಫ್ ಎಜುಕೇಶನ್(ಬಿ.ಎಡ್. ಕಾಲೇಜು) ಇದರ ನಿವೃತ್ತ ಹಿರಿಯ ತಂತ್ರಜ್ಞರಾಗಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಪುತ್ರ ಟ್ಯಾಕ್ಸ್ ಕನ್ಸಲ್ಟೆಂಟ್ ಕೆ.ರಂಜನ್ ಭಾಗವತ್ ಅವರನ್ನು ಆಗಲಿದ್ದಾರೆ.