ರವೀಂದ್ರ ಗಟ್ಟಿ ಪಿಲಾರ್
Update: 2024-12-12 16:59 GMT
ಮಂಗಳೂರು: ಜೆಪ್ಪು ಗುಜ್ಜರಕೆರೆ ನಿವಾಸಿ ರವೀಂದ್ರ ಗಟ್ಟಿ ಪಿಲಾರ್ ಬೆಂಗಳೂರಿನ ತನ್ನ ಪುತ್ರಿಯ ಸ್ವಗೃಹದಲ್ಲಿ ಮಂಗಳವಾರ ನಿಧನರಾದರು.
ಗುರುವಾರ ರವೀಂದ್ರ ಗಟ್ಟಿ ಪಿಲಾರ್ ಮಂಗಳೂರಿನ ಸ್ವಗೃಹದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನದ ಬಳಿಕ ಅಂತಿಮ ಸಂಸ್ಕಾರದ ವಿಧಿ, ವಿಧಾನಗಳನ್ನು ನೆರವೇರಿಸಲಾಯಿತು.
ಇತಿಹಾಸ ಪ್ರಸಿದ್ಧ ಗುಜ್ಜರಕೆರೆ ಸಂರಕ್ಷಣಾ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸಿರುವ ರವೀಂದ್ರ ಗಟ್ಟಿ ಪಿಲಾರ್ ಅವರು ಗುಜ್ಜರ ಕೆರೆ ತೀರ್ಥ ಸಂರಕ್ಷಣಾ ವೇದಿಕೆಯಲ್ಲಿ ತನ್ನನ್ನು ವಿವಿಧ ಸ್ತರಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.