ಅರಂತೋಡು: ಅಹಮ್ಮದ್ ಕುಂಞಿ ಹಾಜಿ ಪಟೇಲ್ ನಿಧನ
Update: 2024-12-13 08:53 GMT
ಸುಳ್ಯ : ಅಹಮದ್ ಕುಂಞಿ ಹಾಜಿ ಪಟೇಲ್ ಅರಂತೋಡು (77) ಶುಕ್ರವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಜುಮಾ ಮಸೀದಿಯ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರೂ, ಅರಂತೋಡು ನೆಹರು ಸ್ಮಾರಕ ಪಿ.ಯು.ಕಾಲೇಜಿನ ಪಾಪ್ಯುಲರ್ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿ, ಅರಂತೋಡು ಅನ್ವಾರುಲ್ ಹುದಾ ಎಸೋಸಿಯೇಷನ್ (ನೋಂ)ಇದರ ಸ್ಥಾಪಕ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ಅರಂತೋಡು ಪಂಚಾಯತ್ ಸದಸ್ಯರಾಗಿ,ಹಳೆಯ ಕಾಲದ ವ್ಯಾಪಾರಿಯಾಗಿ ಸುದೀರ್ಘ ಕಾಲ ಸೇವೆಗೈದಿದ್ದರು.
ಇವರ ಅಜ್ಜ ದಿವಂಗತ ಪಟೇಲ್ ಅಹಮ್ಮದ್ ಕುಂಞಿ ಹಾಜಿ ಯವರು ಅರಂತೋಡಿನ ಪಟೇಲರಾಗಿದ್ದರು. ಮೃತರು ಪತ್ನಿ ಮಕ್ಕಳ ಸಹಿತ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.