ಜ.5: ಕಲ್ಲಚ್ಚು ರಜತ ರಂಗು - 25 ಸಾಧಕರಿಗೆ ಸನ್ಮಾನ

Update: 2024-12-19 13:40 GMT

ಮಂಗಳೂರು: ಸಾಹಿತ್ಯ, ಸಂಸ್ಕೃತಿ, ಕಲೆ, ಸಂಘಟನೆ, ಸದ್ವಿಚಾರ ಎಂಬ ನೆಲೆಯಲ್ಲಿ 25 ವರ್ಷಗಳಿಂದ ಪುಸ್ತಕ ಪ್ರಕಟನೆ ಯಲ್ಲಿ ಸಕ್ರಿಯವಾಗಿರುವ ಕಲ್ಲಚ್ಚು ಪ್ರಕಾಶನದ ಬೆಳ್ಳಿ ಹಬ್ಬ- ರಜತ ರಂಗು ಕಾರ್ಯಕ್ರಮವು ಜ.5ರಂದು ನಗರದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಮತ್ತು ಪೂರಕ ಕ್ಷೇತ್ರದ ರಾಜ್ಯ ಮತ್ತು ಹೊರರಾಜ್ಯದ 25 ಸಾಧಕರಾದ ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಮಡಿಕೇರಿ, ಡಾ. ಪ್ರಸನ್ನ ಕೆ. ಸಂತೇಕಡೂರು ಮೈಸೂರು, ಡಾ. ಕೊಳ್ಚಪ್ಪೆಗೋವಿಂದ ಭಟ್, ವಿಕ್ರಂ ಕಾಂತಿಕೆರೆ ರಾಘವೇಂದ್ರ ಅಗ್ನಿಹೋತ್ರಿ, ಸಂಪತ್ ಸಿರಿಮನೆ ಶೃಂಗೇರಿ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಹಂಝ ಮಲಾರ್, ಎಡ್ವರ್ಡ್ ಲೋಬೊ ತೊಕ್ಕೊಟ್ಟು, ರಾಘವೇಂದ್ರ ಬಿ.ರಾವ್ (ಅನು ಬೆಳ್ಳೆ ಕಾರ್ಕಳ), ಮುಹಮ್ಮದ್ ಅಶೀರುದ್ದೀನ್ ಸಾರ್ತಬೈಲು, ನಾರಾಯಣ ಕುಂಬ್ರ ಪುತ್ತೂರು, ಮಧುರಾ ಕರ್ಣಮ್ ಬೆಂಗಳೂರು, ಡಾ.ಮೋನಾ ಮೆಂಡೋನ್ಸಾ, ಪುಷ್ಪಲತಾ ಪ್ರಭು ಕೊಂಚಾಡಿ, ಪಯ್ಯನ್ನೂರು ರಮೇಶ್ ಪೈ ಕೇರಳ, ಬಿ.ಎನ್. ವಾಸರೆ ದಾಂಡೇಲಿ, ಸುಶೀಲನ್ ಮೋಡಿಯಿಲ್ ಉಡುಪಿ, ಜಗದೀಶ ಭಂಡಾರಿ, ವಿಭಾ ಶ್ರೀನಿವಾಸ್ ನಾಯಕ್, ಶ್ವೇತಾ ಅರೆಹೊಳೆ, ಕೆ. ಲಕ್ಷ್ಮಿನಾರಾಯಣ, ಕ್ರಿಸ್ಟೋಫರ್ ಜೋನ್ ಡಿಸೋಜ, ಪ್ರಕಾಶ ಇಳಂತಿಲ, ವಿದ್ಯಾ ಯು. ಇಡ್ಕಿದು ಅವರನ್ನು ಸನ್ಮಾನಿಸಲಾಗುವುದು.

ಈ ಸಂದರ್ಭ ಕಲ್ಲಚ್ಚು ಪ್ರಕಾಶನದ 15 ಆವೃತ್ತಿಯ ಕಲ್ಲಚ್ಚು ಪ್ರಶಸ್ತಿ ಪುರಸ್ಕೃತರಿಗೆ ಮತ್ತು ಲೇಖಕ ಬಳಗದ ಎಲ್ಲರಿಗೂ ಅಭಿನಂದನೆಗಳನ್ನು ಆತಿಥಿಗಳ ಸಮ್ಮುಖದಲ್ಲಿ ಆಯೋಜಿಸಿಲಾಗಿದೆಯೆಂದು ಪ್ರಕಾಶನದ ವ್ಯವಸ್ಥಾಪಕ ಮುಖ್ಯಸ್ಥ ಮಹೇಶ ಆರ್. ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News