ಹೆಲಿಕಾಪ್ಟರ್‌ನಲ್ಲಿ ಕರಾವಳಿಯ ದರ್ಶನಕ್ಕೆ ಅವಕಾಶ
Update: 2024-12-19 13:26 GMT
ಮಂಗಳೂರು: ಈ ವಷರ್ದ ಕರಾವಳಿ ಉತ್ಸವವನ್ನು ರಮಣೀಯವನ್ನಾಗಿಸಲು ಇದೇ ಮೊದಲ ಬಾರಿಗೆ ಹೆಲಿಕಾಫ್ಟರ್‌ನಲ್ಲಿ ಕರಾವಳಿಯ ಸೊಬಗನ್ನು ಸವಿಯುವ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ ಎಂದು ದ.ಕ.ಜಿಲ್ಲಾಡಳಿತ ತಿಳಿಸಿದೆ.
ಡಿ.21ರಿಂದ 29ರವರೆಗೆ ನಗರದ ಮೇರಿಹಿಲ್ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಪ್ರಯಾಣ ಪ್ರಾರಂಭವಾಗಲಿದೆ. ಸಾರ್ವಜನಿಕರು ನಗರ ದರ್ಶನ ಮತ್ತು ಕಡಲ ಕಿನಾರೆಯ ಸೌಂದರ್ಯವನ್ನು ಸವಿಯಲು ಸಿದ್ಧತೆ ಮಾಡಲಾಗಿದೆ.
ಹೆಲಿಕಾಪ್ಟರ್ ಪ್ರಯಾಣದ ಪ್ರತಿ ಟ್ರಿಪ್‌ನಲ್ಲಿ 6 ಮಂದಿಗೆ ಸಂಚರಿಸಲು ಅವಕಾಶವಿದೆ. ಪ್ರತಿ ವ್ಯಕ್ತಿಗೆ 4500 ರೂ. ನಿಗದಿಪಡಿಸಲಾಗಿದೆ.
ಆಸಕ್ತರು ಬುಕ್ಕಿಂಗ್‌ಗಾಗಿ ವೆಬ್‌ಸೈಟ್ www.helitaxii.com