ಮಂಗಳೂರು| ಕೈದಿಗೆ ಸಹ ಕೈದಿಯಿಂದ ಹಲ್ಲೆ ಆರೋಪ: ಪ್ರಕರಣ ದಾಖಲು

Update: 2024-12-19 15:46 GMT

ಮಂಗಳೂರು, ಡಿ.19: ಪೋಕ್ಸೊ ಕೃತ್ಯದಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿಯ ಮೇಲೆ ಜೈಲಿನ ಸಹ ಕೈದಿಯು 4 ತಿಂಗಳ ಹಿಂದೆ ಹಲ್ಲೆ ನಡೆಸಿದ್ದಕ್ಕೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಫ್ವಾನ್ ಎಂಬಾತನ ವಿರುದ್ಧ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿ ಅಕ್ಟೋಬರ್‌ನಲ್ಲಿ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಆರೋಪಿ ಸಫ್ವಾನ್ ನ್ಯಾಯಾಂಗ ಬಂಧನದಲ್ಲಿದ್ದ. ಈ ಸಂದರ್ಭ ಬೆಳ್ತಂಗಡಿಯ ರಿಝ್ವಾನ್ ಎಂಬಾತ ಸಫ್ವಾನ್‌ಗೆ ಹಲ್ಲೆಗೈದಿದ್ದ ಎನ್ನಲಾಗಿದೆ.

ನ.28ರಂದು ಸಫ್ವಾನ್ ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಗೊಂಡಿದ್ದು, ಆ ಬಳಿಕ ಆತ ಪರೀಕ್ಷೆ ಬರೆದಿದ್ದ. ಕೆಲವು ದಿನಗಳ ಹಿಂದೆ ಜೈಲಿನಲ್ಲಿ ನಡೆದ ಹಲ್ಲೆಯಿಂದ ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಆರೋಪಿಸಿ ಸಫ್ವಾನ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಅಲ್ಲದೆ ಸಫ್ವಾನ್ ನೀಡಿದ ದೂರಿನಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News