ಅಕ್ರಮ ಮರದ ದಿಮ್ಮಿ ಸಾಗಾಟ ಪತ್ತೆ: ಪ್ರಕರಣ ದಾಖಲು
Update: 2024-12-19 13:35 GMT
ಮಂಗಳೂರು: ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ಬೈಕಂಪಾಡಿಯಲ್ಲಿ ಗುರುವಾರ ಮಂಗಳೂರು ಅರಣ್ಯ ಸಂಚಾರಿ ದಳ ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಲಾಗಿದೆ.
ವಿವಿಧ ಜಾತಿಯ 61 ದಿಮ್ಮಿಗಳ ಸಹಿತ 6 ಲಕ್ಷ ರೂ.ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಮುತ್ತಪ್ಪ ಹೊಸಮನಿ ಎಂಬಾತನ ಎಂದು ಪ್ರಕರಣ ದಾಖಲಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಪ್ರಶಾಂತ್, ಶಿವಾನಂದ ಸದೇಪ ಮಾದರ, ಮಂಜುನಾಥ, ವಾಹನ ಚಾಲಕ ಜಯಪ್ರಕಾಶ್ ಪಾಲ್ಗೊಂಡಿದ್ದರು. ಮಂಗಳೂರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಕಾಂತ್ ಖಣದಾಳಿ ಅವರ ಮಾರ್ಗದರ್ಶನದಲ್ಲಿ ಪ್ರಭಾರ ವಲಯ ಅರಣ್ಯಾಧಿಕಾರಿ ಪ್ರಶಾಂತ್ ತನಿಖೆ ನಡೆಸುತ್ತಿದ್ದಾರೆ.