ಡಾ.ಯು.ಎಸ್.ಕೃಷ್ಣ ನಾಯಕ್
Update: 2024-12-04 17:01 GMT
ಮಂಗಳೂರು: ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್‌ನ ಪ್ರಾಂಶುಪಾಲರಾಗಿದ್ದ ಡಾ.ಯು.ಎಸ್.ಕೃಷ್ಣನಾಯಕ್ (63) ಅವರು ಅನಾರೋಗ್ಯದಿಂದಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ನಿಧನರಾದರು.
ಮೃತರು ಪತ್ನಿ , ಪುತ್ರ, ಪುತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಅತ್ತಾವರದ ನಾಯಕ್ ಸ್ಪೆಷಾಲಿಟಿ ಕ್ಲಿನಿಕ್‌ನ ನಿರ್ದೇಶಕರಾಗಿದ್ದ ಡಾ. ಯು.ಎಸ್. ಕೃಷ್ಣ ನಾಯಕ್ ಅವರು ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ (2003), ಇಂಡಿಯನ್ ಆರ್ಥೊಡಾಂಟಿಕ್ ಸೊಸೈಟಿಯ ‘ಅತ್ಯುತ್ತಮ ಪ್ರಾಧ್ಯಾಪಕ ಪ್ರಶಸ್ತಿ’ (2014), ‘ದಿ ಮೋಸ್ಟ್ ಪ್ರೊಆಕ್ಟಿವ್ (ಸೀನಿಯರ್) ಅಕಾಡೆಮಿಶಿಯನ್’ (2015-16) ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.