ಸುಶೀಲ ಶೆಟ್ಟಿ
Update: 2024-12-27 15:47 GMT
ಉಡುಪಿ, ಡಿ.26: ಹಾವಂಜೆ ಗ್ರಾಮದ ಕೀಳಂಜೆ ನಿವಾಸಿ ದಿ. ಕಂಪು ಶೆಟ್ಟಿ ಅವರ ಧರ್ಮಪತ್ನಿ ಸುಶೀಲಾ ಶೆಟ್ಟಿ (74) ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಬುಧವಾರದಂದು ನಿಧನರಾದರು.
ಮೃತರು ಕೃಷಿಕರಾಗಿದ್ದು. ಹಾವಂಜೆ ಗ್ರಾಮದ ಸುತ್ತಮುತ್ತ ಜಾನುವಾರು ಕರು ಹಾಕಿದಾಗ ಅದರ ಶುಶ್ರೂಷೆ ಮತ್ತು ಆರೈಕೆ ಮತ್ತು ಅಗತ್ಯ ಮಾಹಿತಿ ನೀಡಿ ಯಾವುದೇ ಫಲ ಅಪೇಕ್ಷ ಇಲ್ಲದೆ ಉಚಿತವಾಗಿ ಆರೈಕೆ ಮಾಡುತ್ತಿದ್ದು. ಸ್ಥಳೀಯವಾಗಿ ಜನ ಮನ್ನಣೆ ಗಳಿಸಿದ್ದರು. ಸುಶೀಲ ಶೆಟ್ಟಿ ಅವರು ಮೂವರು ಹೆಣ್ಣು ಮಕ್ಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.